ಮುಂಬೈ :ಮಹಾರಾಷ್ಟ್ರ ಸರ್ಕಾರವೂ ರಾಜ್ಯಾದ್ಯಂತ ಆನ್‌ಲೈನ್ ಮತ್ತು ಡಿಜಿಟಲ್ ಶಿಕ್ಷಣವನ್ನು ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಆನ್‌ಲೈನ್ ಮತ್ತು ಡಿಜಿಟಲ್ ಶಿಕ್ಷಣ ರಾಜ್ಯದಲ್ಲಿ ಭಾರಿ ಗಡಿಬಿಡಿಯನ್ನು ಉಂಟು ಮಾಡಬಹುದು ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಆನ್‌ಲೈನ್ ಶಿಕ್ಷಣ ಕುರಿತು ಸಮೀಕ್ಷೆ ಏನ್ ಹೇಳುತ್ತೆ? - ಕೊರೊನಾ ವೈರಸ್
ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದಲ್ಲಿ ಕೇವಲ ಶೇ.10ರಷ್ಟು ವಿದ್ಯಾರ್ಥಿಗಳು ದೂರದರ್ಶನ ಹೊಂದಿದೆ. ಶೇ.35ರಷ್ಟು ವಿದ್ಯಾರ್ಥಿಗಳು ಟೆಲಿವಿಷನ್ ಹೊಂದಿಲ್ಲ ಎಂಬುದು ಶಾಲಾ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಕೇವಲ ಶೇ.61ರಷ್ಟು ವಿದ್ಯಾರ್ಥಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಬಹುದಾಗಿದೆ. ಶೇ.39ರಷ್ಟು ವಿದ್ಯಾರ್ಥಿಗಳ ಬಳಿ ವಾಟ್ಸ್‌ಆ್ಯಪ್ ಇಲ್ಲ. ಸುಮಾರು ಶೇ.31.76ರಷ್ಟು ವಿದ್ಯಾರ್ಥಿಗಳು ಮೊಬೈಲ್ ಫೋನ್ ಹೊಂದಿಲ್ಲ. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದಲ್ಲಿ ಕೇವಲ ಶೇ.10ರಷ್ಟು ವಿದ್ಯಾರ್ಥಿಗಳು ದೂರದರ್ಶನ ಹೊಂದಿದೆ. ಶೇ.35ರಷ್ಟು ವಿದ್ಯಾರ್ಥಿಗಳು ಟೆಲಿವಿಷನ್ ಹೊಂದಿಲ್ಲ ಎಂಬುದು ಶಾಲಾ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣವನ್ನು ಒದಗಿಸುವ ಮಾರ್ಗಗಳನ್ನು ಕಂಡು ಹಿಡಿಯಲು ಒಂದು ಸಮೀಕ್ಷೆ ನಡೆಸಿತು. ಇದಕ್ಕಾಗಿ ಇಲಾಖೆಯು ರಾಜ್ಯದಲ್ಲಿ ಎಷ್ಟು ವಿದ್ಯಾರ್ಥಿಗಳನ್ನು ವಾಟ್ಸ್‌ಆ್ಯಪ್, ಎಸ್‌ಎಂಎಸ್ ಮೂಲಕ ಸಂಪರ್ಕಿಸಬಹುದು. ಎಷ್ಟು ವಿದ್ಯಾರ್ಥಿಗಳನ್ನು ದೂರದರ್ಶನ, ರೇಡಿಯೋ ಇತ್ಯಾದಿವುಗಳ ಮೂಲಕ ಸಂಪರ್ಕಿಸಬಹುದು ಎಂಬ ಮಾಹಿತಿಯನ್ನು ಪಡೆದುಕೊಂಡಿದೆ.