ನವದೆಹಲಿ :ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡುತ್ತಿರುವ ಗುಜರಾತ್ ಸರ್ಕಾರ ಸುಮಾರು 90 ಕೋಟಿ ರೂಪಾಯಿ ಸಂಗ್ರಸಿರುವ ವಿಷಯ ತಿಳಿದ ಸುಪ್ರೀಂಕೋರ್ಟ್ ಆಘಾತ ವ್ಯಕ್ತಪಡಿಸಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರದ ನಿಯಮಗಳನ್ನು ಜಾರಿಗೆ ತರುವುದು ಹೇಗೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ದಂಡ ಮಾತ್ರವೇ ನಿಯಮಗಳ ಅನುಷ್ಠಾನಕ್ಕೆ ಇರುವ ಮಾರ್ಗ, ಅಲ್ಲದೆ 500 ರೂ. ದಂಡ ಸಾಕಾಗುವುದಿಲ್ಲ ಎಂದು ಮೆಹ್ತಾ ಉತ್ತರಿಸಿದ್ದಾರೆ. ಗುಜರಾತ್ ಸರ್ಕಾರ 80 ರಿಂದ 90 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ. ಇದು ನಿಜಕ್ಕೂ ಆಘಾತಕಾರಿ ಅಲ್ಲವೇ? ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ.