ಕರ್ನಾಟಕ

karnataka

ETV Bharat / bharat

ಮಗಳ ಅಂತರ್ಜಾತಿ ವಿವಾಹಕ್ಕೆ ಬೇಸರ: ಆತ್ಮಹತ್ಯೆ ಮಾಡಿಕೊಂಡ ಕುಟುಂಬ - ಅಂತರ್ಜಾತಿ ವಿವಾಹಕ್ಕೆ ಕುಟುಂಬದಿಂದ ಬೇಸರ

ಮಗಳು ಕೆಳಜಾತಿಯ ವ್ಯಕ್ತಿಯನ್ನು ಮದುವೆಯಾದ ನಂತರ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

three of Maha family commit suicideಅಂತರ್ಜಾತಿ ವಿವಾಹಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬ
ಮಗಳ ಅಂತರ್ಜಾತಿ ವಿವಾಹಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬ

By

Published : Feb 15, 2020, 7:41 PM IST

ಗಡ್ಚಿರೋಲಿ(ಮಹಾರಾಷ್ಟ್ರ):ಮಗಳ ಅಂತರ್ಜಾತಿ ಪ್ರೇಮ ವಿವಾಹದಿಂದ ನೊಂದಿರುವ ಆಕೆಯ ಪೋಷಕರು ಮತ್ತು ಸಹೋದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನಂದ್​ ನಗರದಲ್ಲಿ ನಡೆದಿದೆ.

ಕುಟುಂಬಸ್ಥರ ಸಾವಿನ ಸುದ್ದಿ ಕೇಳುತಿದ್ದಂತೆ, ನೂತನವಾಗಿ ವಿವಾಹವಾದ ವಧು-ವರ ಕೂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನವ ದಂಪತಿಗಳನ್ನು ರಕ್ಷಣೆ ಮಾಡಲಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಶಾಲಿನಿ ಇಂಗೋಲ್ ತಿಳಿಸಿದ್ದಾರೆ.

ಮಗಳ ಅಂತರ್ಜಾತಿ ವಿವಾಹಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬ

ವರ್ಗಂಟಿವಾರ್(52), ವೈಶಾಲಿ(43) ಮತ್ತು ಸಾಯಿರಾಂ(19) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ವರ್ಗಂಟಿವಾರ್ ಅವರ ಪುತ್ರಿ ಪ್ರನಳಿ ಪದವಿ ಶಿಕ್ಷಣ ಮುಗಿಸಿದ ನಂತರ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಪರಸ್ಪರ ಪ್ರೀತಿಸಿದ ಈ ಇಬ್ಬರು ಮದುವೆ ಆಗಿರುತ್ತಾರೆ.

ಸೋಮವಾರ ಈ ಇಬ್ಬರು ವಿವಾಹವಾದ ಸುದ್ದಿ ತಿಳಿದ ಪ್ರನಳಿ ಕುಟುಂಬಸ್ಥರು ಆತ್ಮಹತ್ಯೆ ನಿರ್ಧಾರ ಮಾಡಿ ತಾವು ಬಾಡಿಗೆಗೆ ಇದ್ದ ಮನೆ ಮಾಲೀಕರಿಗೆ ಕರೆಮಾಡಿ ವಿಷಯ ತಿಳಿಸಿ ಸಾವನ್ನಪ್ಪಿದ್ದಾರೆ.

ABOUT THE AUTHOR

...view details