ಖಂಡ್ವ/ಮಧ್ಯಪ್ರದೇಶ:5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಖಂಡ್ವ ಜಿಲ್ಲೆಯ ಬೋರಾಡಿಮಲ್ ಗ್ರಾಮದ ಶಿವರಾಜ್ ಎಂಬ ವಿದ್ಯಾರ್ಥಿ ಪ್ರತಿದಿನ ಕುದುರೆ ಏರಿ ಶಾಲೆಗೆ ತೆರಳುತ್ತಾನೆ.
ಈ ಹಿಂದೆ ಸೈಕಲ್ನಿಂದ ಬಿದ್ದು ಶಿವರಾಜ್ ಗಾಯಗೊಂಡಿದ್ದ. ಇದಾದ ಬಳಿಕ ಅಪಘಾತವನ್ನು ತಪ್ಪಿಸುವ ಉದ್ದೇಶದಿಂದ ಶಿವರಾಜ್ ಈ ರೀತಿ ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಾನಂತೆ.
ಕುದುರೆ ಸವಾರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಹಣ ಉಳಿಸಬಹುದು:
ಅಪಘಾತದ ಭಯ ಆವರಿಸಿರುವ ಕಾರಣ ನಾನು ಬೈಸಿಕಲ್ ಅಥವಾ ಇತರ ಯಾವುದೇ ವಾಹನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು 12 ವರ್ಷದ ಶಿವರಾಜ್ ಹೇಳಿದ್ದಾನೆ. ಕುದುರೆ ಸವಾರಿ ವೇಳೆ ಯಾವುದೇ ಅಪಘಾತ ಸಂಭವಿಸುವುದಿಲ್ಲ. ಏಕೆಂದರೆ ಹಾದಿಯಲ್ಲಿ ಓಡುವಾಗ, ಕುದುರೆ ಸಂಭವನೀಯ ಅಪಘಾತವನ್ನು ಗ್ರಹಿಸುವ ಮೂಲಕ ತನ್ನ ಜೀವದ ಜೊತೆಗೆ ನನ್ನನ್ನೂ ಕಾಪಾಡುತ್ತದೆ. ಹಾಗೂ ಇದು ಪರಿಸರವನ್ನು ಸಹ ರಕ್ಷಿಸುತ್ತದೆ.