ಕರ್ನಾಟಕ

karnataka

ETV Bharat / bharat

ಸಿಎಂ ಉದ್ಧವ್​ ಠಾಕ್ರೆ ವಿರುದ್ಧ FB ಪೋಸ್ಟ್: ವ್ಯಕ್ತಿಗೆ ಥಳಿಸಿ, ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು! - ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ  'ಆಕ್ಷೇಪಾರ್ಹ ಪೋಸ್ಟ್

ಜಾಮಿಯಾ ಮಿಲಿಯಾ ಘಟನೆಯನ್ನು ಜಲಿಯನ್ ವಾಲಾ ಬಾಗ್​ ದುರಂತದ ಜೊತೆ ಹೋಲಿಕೆ ಮಾಡಿರುವುದು ತಪ್ಪು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಫೇಸ್​ಬುಕ್ ಪೋಸ್ಟ್​ ಮಾಡಿದ್ದ ವ್ಯಕ್ತಿಯೋರ್ವನಿಗೆ ಶಿವಸೇನಾ ಕಾರ್ಯಕರ್ತರು ಥಳಿಸಿ, ಆತನ ತಲೆ ಬೋಳಿಸಿರುವ ಆರೋಪ ಕೇಳಿಬಂದಿದೆ.

Man beaten for his fb post against Uddhav Thackeray
ಹಿರಾಮೈ ತಿವಾರಿ

By

Published : Dec 24, 2019, 8:12 AM IST

Updated : Dec 24, 2019, 8:46 AM IST

ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ 'ಆಕ್ಷೇಪಾರ್ಹ ಪೋಸ್ಟ್'​ ಮಾಡಿದ್ದಕ್ಕೆ ವ್ಯಕ್ತಿಯೋರ್ವನಿಗೆ ಶಿವ ಸೇನಾ ಕಾರ್ಯಕರ್ತರು ಥಳಿಸಿ, ಆತನ ತಲೆ ಬೋಳಿಸಿರುವ ಆರೋಪ ಕೇಳಿಬಂದಿದೆ.

ಡಿ. 19 ರಂದು ಜಾಮಿಯಾ ಮಿಲಿಯಾ ಘಟನೆಯನ್ನು ಜಲಿಯನ್ ವಾಲಾ ಬಾಗ್​ ದುರಂತದ ಜೊತೆ ಸಿಎಂ ಹೋಲಿಕೆ ಮಾಡಿರುವುದು ತಪ್ಪು ಎಂದು ನಾನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದೆ. ಆ ಬಳಿಕ 25-30 ಮಂದಿ ಬಂದು ನನಗೆ ಹೊಡೆದು, ನನ್ನ ತಲೆ ಬೋಳಿಸಿದ್ದಾರೆ ಎಂದು ವಡಾಲಾ ನಿವಾಸಿ ಹಿರಾಮೈ ತಿವಾರಿ ಎಂಬವರು ಆರೋಪಿಸಿದ್ದಾರೆ.

ಘಟನೆ ಬಳಿಕ ದೂರು ನೀಡಲು ನಾನು ಪೊಲೀಸ್​ ಠಾಣೆಗೆ ಹೋದೆ. ಮೊದಲು ಪೊಲೀಸರು ಈ ಕುರಿತು ವರದಿ ತಯಾರಿಸಿದರು. ಆದರೆ ಮತ್ತೊಂದು ಹೊಸ ಪತ್ರವನ್ನು ಟೈಪ್​ ಮಾಡಿ ರಾಜಿಯಾಗುವಂತೆ ತಿಳಿಸಿದರು. ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಿಬೇಕು ಎಂದು ಆಗ್ರಹಿಸುತ್ತೇನೆ ಎಂದು ಹಿರಾಮೈ ತಿವಾರಿ ಹೇಳಿದ್ದಾರೆ.

ದೆಹಲಿಯ ಜಾಮಿಯಾ ಮಿಲಿಯಾ ವಿವಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರ ಲಾಠಿ ಏಟಿಗೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಕುರಿತು ಡಿ.17 ರಂದು ಪ್ರತಿಕ್ರಿಯೆ ನೀಡಿದ್ದ ಸಿಎಂ ಉದ್ಧವ್​ ಠಾಕ್ರೆ, "ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದದ್ದು ಜಲಿಯನ್ ವಾಲಾ ಬಾಗ್ ದುರಂತದಂತಿದೆ. ವಿದ್ಯಾರ್ಥಿಗಳು 'ಯುವ ಬಾಂಬ್' ಇದ್ದಂತೆ. ವಿದ್ಯಾರ್ಥಿಗಳೊಂದಿಗೆ ಹೀಗೆ ಪೊಲೀಸರು ನಡೆದುಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ" ಎಂದು ಹೇಳಿದ್ದರು.

Last Updated : Dec 24, 2019, 8:46 AM IST

ABOUT THE AUTHOR

...view details