ಮುಂಬೈ:ಮಹಾರಾಷ್ಟ್ರದ ಪರಭಾನಿಯ ಶಿವಸೇನೆ ಸಂಸದ ಸಂಜಯ್ ಜಾಧವ್ ತಮ್ಮ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಶಿವಸೇನೆ ಸಂಸದ ಸಂಜಯ್ ಜಾಧವ್ ರಾಜೀನಾಮೆ - ಸಂಜಯ್ ಜಾಧವ್ ರಾಜೀನಾಮೆ
ತನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಹಾರಾಷ್ಟ್ರದ ಪರಭಾನಿಯ ಶಿವಸೇನೆ ಸಂಸದ ಸಂಜಯ್ ಜಾಧವ್ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸದ ಸಂಜಯ್ ಜಾಧವ್
ಜಾಧವ್ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಳುಹಿಸಿದ್ದಾರೆ. "ನನ್ನ ಕ್ಷೇತ್ರದ ಶಿವಸೇನೆ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನನಗೆ ಸಾಧ್ಯವಾಗದಿದ್ದರೆ ಪಕ್ಷದ ಸಂಸದರಾಗಿರಲು ನನಗೆ ಯಾವುದೇ ಹಕ್ಕಿಲ್ಲ. ಆದ್ದರಿಂದ ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ" ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಪರಭಾನಿ ಜಿಲ್ಲೆಯಲ್ಲಿ ಜಿಂತೂರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗೆ ಶೀವಸೇನೆಯ ಸದಸ್ಯನಲ್ಲದ ವ್ಯಕ್ತಿಯನ್ನು ನೇಮಕ ಮಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಮುಜುಗರ ತರಿಸಿದೆ ಎಂದು ಜಾಧವ್ ಹೇಳಿದ್ದಾರೆ.