ಕರ್ನಾಟಕ

karnataka

ETV Bharat / bharat

ಅಹಂಕಾರದ ಕುರ್ಚಿಯಿಂದ ಎದ್ದೇಳಿ.. ರೈತರಿಗೆ ನ್ಯಾಯ ಒದಗಿಸಿ.. ಕೇಂದ್ರಕ್ಕೆ ರಾಹುಲ್‌ ಗಾಂಧಿ ಆಗ್ರಹ - Congress leader Rahul Gandhi on twitter against central govt

ರೈತರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಅವರ ಋಣ ತೀರಿಸಬಹುದೇ ಹೊರತು, ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ..

Rahul
ರಾಹುಲ್ ಗಾಂಧಿ

By

Published : Dec 1, 2020, 1:29 PM IST

ನವದೆಹಲಿ :ಕೇಂದ್ರ ಸರ್ಕಾರ ತನ್ನ ಅಹಂಕಾರ ಬಿಟ್ಟು ಪ್ರತಿಭಟನಾ ನಿರತ ರೈತರಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ಪಂಜಾಬ್, ಹರಿಯಾಣದ ರೈತರು ದೆಹಲಿ ಪ್ರವೇಶಿಸದಂತೆ ಗಡಿಭಾಗಗಳಲ್ಲೇ ತಡೆಯಲಾಗುತ್ತಿದೆ. ಇದನ್ನು ವಿರೋಧಿಸಿ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

"ಅಹಂಕಾರದ ಕುರ್ಚಿಯಿಂದ ಎದ್ದೇಳಿ. ರೈತರಿಗೆ ಪ್ರತಿಭಟಿಸುವ ಹಕ್ಕನ್ನು ನೀಡಿ. ಅನ್ನದಾತ ರಸ್ತೆಗೆ ಪ್ರತಿಭಟಿಸಲು ಇಳಿದಿದ್ದಾನೆ. ನಾವೆಲ್ಲರೂ ರೈತರ ಕಠಿಣ ಪರಿಶ್ರಮಕ್ಕೆ ಋಣಿಯಾಗಿದ್ದೇವೆ.

ಅವರಿಗೆ ನ್ಯಾಯ ನೀಡಿ, ಹಕ್ಕು ಒದಗಿಸುವುದರ ಮೂಲಕ ಮಾತ್ರ ಈ ಋಣ ತೀರಿಸಬಹುದೇ ಹೊರತು ಅವರ ಮೇಲೆ ಲಾಠಿಯಿಂದ ಹೊಡೆಯುವುದರಿಂದ, ಅಶ್ರುವಾಯು ಪ್ರಯೋಗಿಸುವುದರಿಂದ ಅಲ್ಲ" ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ABOUT THE AUTHOR

...view details