ಕರ್ನಾಟಕ

karnataka

ETV Bharat / bharat

ಸಚಿವೆ ಸ್ಮೃತಿ ಇರಾನಿ ಗೆದ್ದಿರೋದಕ್ಕೆ ಕಾರಣ ಏನು.. ಆ ರಹಸ್ಯ ಬಿಚ್ಚಿಟ್ಟ ಹಿರಿಯ ಗಾಯಕಿ ಆಶಾ ಭೋಸ್ಲೆ - undefined

ಹಿರಿಯ ಗಾಯಕಿ ಆಶಾ ಭೋಸ್ಲೆ ಸ್ಮೃತಿ ಇರಾನಿಯ ವಿಶೇಷ ಗುಣವನ್ನು ಮೆಚ್ಚಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಸಚಿವೆ

By

Published : May 31, 2019, 3:35 PM IST

ನವದೆಹಲಿ : ಉತ್ತರಪ್ರದೇಶದ ಅಮೇಠಿಯಿಂದ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ನಾಯಕಿ ಸ್ಮೃತಿ ಇರಾನಿಗೆ ಹಿರಿಯ ಗಾಯಕಿ ಆಶಾ ಭೋಂಸ್ಲೆ ಟ್ವೀಟ್ ಮಾಡುವ ಮೂಲಕ ಹೊಗಳಿ ಶುಭಾಶಯ ಕೋರಿದ್ದಾರೆ.

ನಿನ್ನೆ ನಡೆದ ಪ್ರಧಾನಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಶಾ ಬೋಂಸ್ಲೆ ಜನಗಳ ಮಧ್ಯೆ ಅತಂತ್ರರಾಗಿ ಇದ್ದ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರಿಗೆ ಸಹಾಯ ಮಾಡಿ, ಬೇಗ ಮನೆ ತಲುಪಲು ಸಹಕರಿಸಿದ್ದಾರೆ. ಸ್ಮೃತಿ ಇರಾನಿಯ ಈ ಸಹಾಯ ಗುಣವನ್ನು ಮೆಚ್ಚಿ ಟ್ವೀಟ್ ಮಾಡಿರುವ ಭೋಂಸ್ಲೆ ಈ ಕಾಳಜಿಯಿಂದಾಗಿಯೇ ಸ್ಮೃತಿ ಇಂದು ಗೆದ್ದಿದ್ದಾರೆಂದು ತಿಳಿಸಿದ್ದಾರೆ.

ನಾನು ಸುರಕ್ಷಿತವಾಗಿ ಮನೆಗೆ ತಲುಪಿದೆ. ಸ್ಮೃತಿ ಇರಾನಿ ಹೊರತುಪಡಿಸಿ ನನಗೆ ಯಾರೂ ಸಹಾಯ ಮಾಡಲಿಲ್ಲ. ಯಾಕೆಂದರೆ, ಅವರು ಕೇರ್ ಮಾಡುತ್ತಾರೆ ಮತ್ತು ಅದಕ್ಕಾಗಿಯೇ ಅವರು ಗೆದ್ದಿದ್ದಾರೆ ಎಂದು ಆಶಾ ಭೋಂಸ್ಲೆ ಸ್ಮೃತಿಯನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details