ನವದೆಹಲಿ:ಕಾಂಗ್ರೆಸ್ ಸಂಸದ, ಲೇಖಕ ಶಶಿ ತರೂರ್ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದು, An Era of Darkness ಎಂಬ ಪುಸ್ತಕಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಗೌರವ ಸಿಕ್ಕಿದೆ.
ಕಾಂಗ್ರೆಸ್ ನಾಯಕ, ಲೇಖಕ ಶಶಿ ತರೂರ್ಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಶಶಿ ತರೂರ್ಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ 'ಆನ್ ಎರಾ ಆಫ್ ಡಾರ್ಕ್ನೆಸ್' ಪುಸ್ತಕಕ್ಕಾಗಿ ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.
ಶಶಿ ತರೂರ್
ತಿರುವನಂತಪುರದ ಸಂಸದರಾಗಿರುವ ಶಶಿ ತರೂರ್ 2016ರಲ್ಲಿ An Era of Darkness ಪುಸ್ತಕ ಪ್ರಕಟಿಸಿದ್ದರು. ಇದೇ ಕೃತಿ ಇಂಗ್ಲೆಂಡ್ನಲ್ಲೂ ಮುದ್ರಣಗೊಂಡು ಪ್ರಕಟಗೊಂಡಿತ್ತು. ಜತೆಗೆ ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟಗೊಂಡಿದ್ದವು.
23 ಭಾಷೆಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, ಅದರಲ್ಲಿ ಆಂಗ್ಲ ಭಾಷೆಯ ಕೃತಿಗಾಗಿ ಶಶಿ ತರೂರ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.