ತಿರುವನಂತಪುರಂ:ಇಲ್ಲಿನ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್, ಗಾಂಧಾರಿ ಅಮ್ಮನ್ ಕೋವಿಲ್ ದೇವಸ್ಥಾನದಲ್ಲಿ ತುಲಾಭಾರ ನಡೆಸುವ ವೇಳೆ ತಕ್ಕಡಿ ಮುರಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೇರಳ ರಾಜ್ಯದಾದ್ಯಂತ ಹೊಸ ವರ್ಷ 'ವಿಷು' ಹಬ್ಬವನ್ನು ಆಚರಿಸಲಾಗುತ್ತಿದ್ದು, ಜನರು ಪ್ರಾರ್ಥನೆ ಸಲ್ಲಿಸಲು ದೇವಾಲಯಗಳಿಗೆ ಭೇಟಿ ನೀಡುತಿದ್ದಾರೆ. ಇತ್ತ ಶಶಿ ತರೂರ್ ಕೂಡ ಪೂಜೆ ಸಲ್ಲಿಸಲು ಗಾಂಧಾರಿ ಅಮ್ಮನ್ ಕೋವಿಲ್ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದಲ್ಲಿ ತುಲಾಭಾರ ನಡೆಸುವ ವೇಳೆ ಏಕಾಏಕಿ ತಕ್ಕಡಿ ಮುರಿದು ಬಿದ್ದ ಪರಿಣಾಮ ಕೆಳಗೆ ಬಿದ್ದ ಶಶಿ ತರೂರು ಗಂಭೀರವಾಗಿ ಗಾಯಗೊಂಡಿದ್ದಾರೆ.