ಕರ್ನಾಟಕ

karnataka

ETV Bharat / bharat

ಭೀಮಾ ಕೋರೆಗಾಂವ್ ಗಲಭೆ ಪ್ರಕರಣ... ಎಸ್​ಐಟಿ ತನಿಖೆ ಕುರಿತು ಶರದ್ ಪವಾರ್ ಚರ್ಚೆ

ಭೀಮಾ ಕೋರೆಗಾಂವ್ ಗಲಭೆ ವಿಚಾರ ಕುರಿತು ಎನ್​ಸಿಪಿ ನಾಯಕ ಶರದ್ ಪವಾರ್ ಮಹಾರಾಷ್ಟ್ರ ಸಚಿವರೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಅಪರಾಧಿಗಳನ್ನು ಪತ್ತೆ ಮಾಡಲು ಎಸ್ಐಟಿ ರಚನೆಗೆ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.

Sharad Pawar holds meeting over Koregaon-Bhima violence case
ಮಹಾರಾಷ್ಟ್ರ ಸಚಿವರೊಂದಿಗೆ ಶರದ್ ಪವಾರ್ ಸಭೆ

By

Published : Sep 11, 2020, 9:56 AM IST

ಮುಂಬೈ: 2018 ರ ಕೋರೆಗಾಂವ್-ಭೀಮಾ ಹಿಂಸಾಚಾರದ ಬಗ್ಗೆ ಎನ್​ಸಿಪಿ ನಾಯಕ ಶರದ್ ಪವಾರ್ ಸಚಿವರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಇಂಧನ ಸಚಿವ ಮತ್ತು ಕಾಂಗ್ರೆಸ್ ಮುಖಂಡ ನಿತಿನ್ ರಾವತ್, ಪಿತೂರಿಯನ್ನು ನಡೆಸಿದ ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ರಾವತ್ ಅವರಲ್ಲದೆ, ಉಪಮುಖ್ಯಮಂತ್ರಿ ಅಜಿತ್ ಪವಾರ್, ಗೃಹ ಸಚಿವ ಅನಿಲ್ ದೇಶ್​ಮುಖ್ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಭಾಗವಹಿಸಿದ್ದರು.

ಭೀಮಾ ಕೋರೆಗಾಂವ್ ಗಲಭೆಯ ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಲು ಎಸ್ಐಟಿಯನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಶರದ್ ಪವಾರ್ ಅವರೇ ಬಿಜೆಪಿ ಸರ್ಕಾರದಿಂದ ಶಿಕ್ಷೆ ಅನುಭವಿಸದವರನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದು ನಿತಿನ್ ರಾವತ್ ಟ್ವೀಟ್ ಮಾಡಿದ್ದಾರೆ.

ವರ್ಷದ ಆರಂಭದಲ್ಲಿ, ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಯನ್ನು ಕೋರಿ ಶರದ್ ಪವಾರ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು.

ಕೆಲವು ಜನರನ್ನು ನಕ್ಸಲೈಟ್‌ಗಳು (ಪ್ರಕರಣಕ್ಕೆ ಸಂಬಂಧಿಸಿದಂತೆ) ಎಂದು ಕರೆಯಲಾಗುತ್ತಿತ್ತು. ಇದು ಸರಿಯೆಂದು ನಾವು ಭಾವಿಸುವುದಿಲ್ಲ. ಆದ್ದರಿಂದ ನಿಜವಾದ ಪರಿಸ್ಥಿತಿ ಏನು ಎಂದು ಕಂಡುಹಿಡಿಯಲು ನಾವು ಈ ವಿಷಯವನ್ನು ಪರಿಶೀಲಿಸಿದ್ದೇವೆ ಮತ್ತು ತಜ್ಞರೊಂದಿಗೆ ಮಾತನಾಡಿದ ನಂತರ ಏನು ಮಾಡಬಹುದು ಎಂಬುದರ ಕುರಿತು ಯೋಚಿಸುತ್ತಿದ್ದೇವೆ ಎಂದು ಸಭೆಯ ನಂತರ ಶರದ್​ ಪವಾರ್ ತಿಳಿಸಿದ್ದಾರೆ.

ABOUT THE AUTHOR

...view details