ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಸಕಲ ರೀತಿಯ ತಯಾರಿ ನಡೆಯುತ್ತಿದೆ. ಆದ್ರೆ ಮುಹೂರ್ತ ನಿಗದಿ ವಿಚಾರದಲ್ಲಿ ವಿಚಾರವಾಗಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ಹೇಳುವುದೇನು?
ಭಾದ್ರಪದ ಸಮಯದಲ್ಲಿ ನಡೆಯುವ ಯಾವುದೇ ಕಾರ್ಯ ವಿನಾಶಕಾರಿಯಾಗಿರುತ್ತದೆ. ಭೂಮಿ ಪೂಜೆಗೆ ನಿಗದಿಪಡಿಸಿದ ಆಗಸ್ಟ್ 5ರ ಮಧ್ಯಾಹ್ನ 12 ಗಂಟೆ 15 ನಿಮಿಷ 32 ಸೆಂಕೆಡ್ ಅಶುಭ ಘಳಿಗೆ ಅನ್ನೋದು ದ್ವಾರಕಾ-ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ.
ಧರ್ಮ-ಗ್ರಂಥಗಳಲ್ಲಿ ಭಾದ್ರಪದ ತಿಂಗಳಲ್ಲಿ ಮನೆ ಹಾಗೂ ದೇವಾಲಯ ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಇದರಿಂದ ಇಡೀ ಜಗತ್ತಿಗೆ ಕೇಡು ಉಂಟಾಗಲಿದೆ. ಹಾಗಾಗಿ, ಶುಭ ಸಮಯ ಹುಡುಕಿ ಈ ಕಾರ್ಯ ನಡೆಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ. ದೇಗುಲ ನಿರ್ಮಾಣ ಕಾರ್ಯ ಸರಿಯಾದ ಸಮಯದಲ್ಲಿ ನಡೆಯಬೇಕು ಅನ್ನೋದಷ್ಟೇ ನನ್ನ ಉದ್ದೇಶ ಎಂದಿದ್ದಾರೆ.