ಕರ್ನಾಟಕ

karnataka

ETV Bharat / bharat

ಎಸಿಪಿಗೆ ಥಳಿಸಿದ ಪ್ರಕರಣ .. ವರದಿ ಕೇಳಿದ ಗೃಹ ಇಲಾಖೆ

ಆಟೋ ಡ್ರೈವರ್​ಗಳ ಮೇಲೆ ಪೊಲೀಸರ ದೌರ್ಜನ್ಯ ಪ್ರಕರಣವನ್ನ ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

ಗೃಹ ಸಚಿವ ಅಮಿತ್​ ಶಾ

By

Published : Jun 17, 2019, 7:40 PM IST

ನವದೆಹಲಿ: ಆಟೋ ಡ್ರೈವರ್​ಗಳ ಮೇಲೆ ಪೊಲೀಸರ ದೌರ್ಜನ್ಯ ಹಾಗೂ ಅದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಎಸಿಪಿ ಮೇಲೆ ಮಾಡಿದ ಹಲ್ಲೆಗೆ ಸಂಬಂಧಿಸಿದ ಪ್ರಕರಣವನ್ನ ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಪೊಲೀಸರಿಂದ ಗೃಹ ಸಚಿವ ಅಮಿತ್​ ಶಾ ವರದಿ ನೀಡುವಂತೆ ದೆಹಲಿ ಪೊಲೀಸ್​ ಇಲಾಖೆಗೆ ಸೂಚನೆ ನೀಡಿದ್ದಾರೆ.

ಇಲ್ಲಿನ ಮುಖರ್ಜಿ ನಗರದಲ್ಲಿ ಪೊಲೀಸರು ಆಟೋ ಡ್ರೈವರ್ ಹಾಗೂ ಆತನ ಪುತ್ರನ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರ ದೌರ್ಜನ್ಯ ಖಂಡಿಸಿ ಆಟೋ ಡ್ರೈವರ್​ಗಳು ಪ್ರತಿಭಟನೆ ಮಾಡಿ, ಶಾಲಿಮಾರ್​ ಬಾಗ್​​ ಪೊಲೀಸ್​ ಠಾಣೆ ಎಸಿಪಿ ಕೆ.ಜಿ. ತ್ಯಾಗಿ ಮೇಲೆ ಹಲ್ಲೆ ನಡೆಸಿದ್ದರು.

ಈ ಸಂಬಂಧದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಇದೊಂದು ಕ್ರೂರ ಹಾಗೂ ದುರದೃಷ್ಟಕರ ಎಂದು ಪ್ರತಿಕ್ರಿಯೆ ನೀಡಿದ್ದರಲ್ಲದೆ, ಪ್ರಕರಣವನ್ನ ನಿಷ್ಪಕ್ಷಪಾತವಾದ ತನಿಖೆ ನಡೆಸುವಂತೆ ಒತ್ತಾಯಿಸಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು.

ಪ್ರಕರಣ ಗಂಭೀರತೆ ಪಡೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡಿದ್ದು, ಪ್ರಕರಣದ ವರದಿ ಕೇಳಿದೆ.

For All Latest Updates

TAGGED:

ABOUT THE AUTHOR

...view details