ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಲಿದೆ: ಶಹನವಾಜ್ ಹುಸೇನ್​! - Shahnawaz Hussain takes dig at Mamata

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್​ ಹುಸೇನ್​ ವಾಗ್ದಾಳಿ ನಡೆಸಿದರು.

Shahnawaz Hussain
Shahnawaz Hussain

By

Published : Jan 24, 2021, 4:13 AM IST

ಅಜ್ಮೀರ್​(ರಾಜಸ್ಥಾನ): ತಾಯಿ, ಹಾಗೂ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಬಂದೂಕು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿರುವ ಶಹನವಾಜ್​ ಹುಸೇನ್​, ದೀದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.

ಶಹನವಾಜ್ ಹುಸೇನ್​ ಮಾತು

ರಾಜಸ್ಥಾನದ ಅಜ್ಮೀರ್​ನಲ್ಲಿರುವ ಖ್ವಾಜಾ ಮೊಯಿನುದ್ದೀನ್​ ಚಿಸ್ತಿಯ ಐತಿಹಾಸಕ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್​, ದೇಶಾದ್ಯಂತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತಿದೆ. ಕಾಶ್ಮೀರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಚುನಾವಣೆಗಳಲ್ಲೂ ಕಮಲ ಅರಳಿದೆ. ಅದಕ್ಕೆ ನಾವೆಲ್ಲರೂ ಸಾಕ್ಷಿ ಎಂದು ಹೇಳಿದರು.

ಓದಿ: ಜೈ ಶ್ರೀರಾಮ್‌ ಘೋಷಣೆಯ ಸಿಟ್ಟು; ಭಾಷಣ ನಿರಾಕರಿಸಿದ ಸಿಎಂ ಮಮತಾ ಬ್ಯಾನರ್ಜಿ!

ಕಾಶ್ಮೀರದಿಂಧ ಕನ್ಯಾಕುಮಾರಿವರೆಗೆ ಕಮಲ ಅರಳುತ್ತಿದೆ. ಇದೀಗ ಬಂಗಾಳದ ಸರಣಿ ಎಂದು ಅವರು ಹೇಳಿದರು.ಬಂಗಾಳದಲ್ಲಿ ಕಮಲ ಅರಳಲಿದ್ದು, ಕೇರಳದಲ್ಲೂ ಬಿಜೆಪಿ ಅರಳುವ ದಿನ ದೂರವಿಲ್ಲ ಎಂದರು.

ಇದೇ ವೇಳೆ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, ಸರ್ಕಾರ ಮತ್ತು ರೈತ ಸಂಘಟನೆಗಳ ಮಧ್ಯೆ ಮಾತುಕತೆ ನಡೆಯುತ್ತಿದ್ದು, ಅದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮಾತುಕತೆ ಮೂಲಕ ಈ ಸಮಸ್ಯೆ ಬಗ್ಗೆಹರಿಯಲಿದೆ ಎಂದು ತಿಳಿಸಿದರು.

ABOUT THE AUTHOR

...view details