ಶಹಜಾಹನ್ಪುರ್ (ಉತ್ತರಪ್ರದೇಶ): ಕಟ್ಟಡ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸುಡುವ ಬಿಸಿಲು, ಕೊರೆವ ಚಳಿ ಮತ್ತು ಮಳೆಯಲ್ಲೇ ಶಹಜಾಹನ್ಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಠ ಕಲಿಯುವ ಪರಿಸ್ಥಿತಿ ಬಂದೊದಗಿದೆ.
ಆ ಶಾಲೆಯ ಶಿಕ್ಷಕಿ ಮಾತನಾಡಿ, ಬಾಯಾರಿದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ಸೌಲಭ್ಯವಂತೂ ಇಲ್ಲವೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ತಮ್ಮ ಮನೆಗಳಿಗೆ ಹೋಗುತ್ತಾರೆ. ಒಂದು ವೇಳೆ ಮಳೆ ಬಂದರೆ ಶಾಲೆಗೆ ರಜೆ ಘೋಷಿಸುತ್ತೇವೆ ಎಂದು ಸಮಸ್ಯೆಗಳ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.