ಕರ್ನಾಟಕ

karnataka

ETV Bharat / bharat

ಶಾಹಿನ್​ ಬಾಗ್​ ಪ್ರತಿಭಟನಾ ಸ್ಥಳ ತೆರವು: ಸುಪ್ರೀಂ ಮೊರೆಹೋದ ಹೋರಾಟಗಾರರು

ಪ್ರತಿಭಟನಾ ಸ್ಥಳ ನಾಶಪಡಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದು, ನಾಗರಿಕರ ಹಕ್ಕುಗಳಿಗಾಗಿ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಕೋರಿದ್ದಾರೆ. ಶಾಹೀನ್ ಬಾಗ್ ಪ್ರತಿಭಟನಾಕಾರರ ಪರವಾಗಿ ವಾದಿಸಲು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಂವಾದಕರ ಮೂಲಕ ಪತ್ರ ಬರೆದಿದ್ದಾರೆ. .

ಸ್​ಸಿ ಮೊರೆಹೋದ ಹೋರಾಟಗಾರರು
ಸ್​ಸಿ ಮೊರೆಹೋದ ಹೋರಾಟಗಾರರು

By

Published : Mar 26, 2020, 4:03 PM IST

ನವದೆಹಲಿ: ಪ್ರತಿಭಟನೆಯ ಸ್ಥಳವನ್ನು ಬಲವಂತವಾಗಿ ನಾಶ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಶಾಹೀನ್ ಬಾಗ್ ಪ್ರತಿಭಟನಾಕಾರರು ಸುಪ್ರೀಂಕೋರ್ಟ್​ಗೆ ಪತ್ರ ಬರೆದಿದ್ದಾರೆ.

ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದು, ನಾಗರಿಕರ ಹಕ್ಕುಗಳಿಗಾಗಿ ಸುಪ್ರೀಂಕೋರ್ಟ್‌ನಿಂದ ನಿರ್ದೇಶನ ಕೋರಿದ್ದಾರೆ. ಶಾಹೀನ್ ಬಾಗ್ ಪ್ರತಿಭಟನಾಕಾರರ ಪರವಾಗಿ ವಾದಿಸಲು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಂವಾದಕರ ಮೂಲಕ ಪತ್ರ ಬರೆದಿದ್ದಾರೆ. .

ಭಾರತದಾದ್ಯಂತ ಕೋವಿಡ್-19 ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಶಹೀನ್ ಭಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಧರಣಿ ಸ್ಥಳದಿಂದ ಪ್ರತಿಭಟನಕಾರರನ್ನು ಪೊಲೀಸರು ತೆರವುಗೊಳಿಸಿದ್ದರು. ಈ ಸಂಬಂಧ ಈಗ ಪ್ರತಿಭಟನಾಕಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ 100 ದಿನಗಳಿಂದ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ಇವರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ಕೊರೊನಾ ಸೋಂಕು ಹಬ್ಬುವ ಭೀತಿಯಿಂದ ಪ್ರತಿಭಟನಾಕಾರರ ಸಂಖ್ಯೆಯೂ ದಿನೇ ದಿನೆ ಕಡಿಮೆಯಾಗುತ್ತಿತ್ತು. ಮಾತ್ರವಲ್ಲದೇ ಪ್ರತಿಭಟನಾ ಸ್ಥಳದಲ್ಲಿ ಜನರು ಪರಸ್ಪರ ಅಂತರ ಕಾಯ್ದುಕೊಂಡಿದ್ದರು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಧರಣಿಯನ್ನು ಮುಂದುವರೆಸಿದ್ದರು.

ABOUT THE AUTHOR

...view details