ಕರ್ನಾಟಕ

karnataka

ETV Bharat / bharat

ವಲಸೆ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡಿಕೊಡಿ.. ಮಮತಾ ದೀದಿಗೆ ಪತ್ರ ಬರೆದ ಅಮಿತ್‌ ಶಾ.. - ಕೇಂದ್ರ ಸರ್ಕಾರವು ರೈಲು ಸೇವೆ

ಪಶ್ಚಿಮ ಬಂಗಾಳದಲ್ಲಿರುವ ವಲಸೆ ಕಾರ್ಮಿಕರು ಕೂಡ ಮನೆ ತಲುಪಲು ಉತ್ಸುಕರಾಗಿದ್ದಾರೆ ಮತ್ತು ಕೇಂದ್ರ ಸರ್ಕಾರವು ರೈಲು ಸೇವೆಗಳಿಗೆ ಸಹಕರಿಸುತ್ತಿದೆ. ಆದರೆ ನಮಗೆ ಪಶ್ಚಿಮ ಬಂಗಾಳದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ..

ಅಮಿತ್ ಶಾ
Mamata

By

Published : May 9, 2020, 12:54 PM IST

ನವದೆಹಲಿ :ಪಶ್ಚಿಮ ಬಂಗಾಳ ಸರ್ಕಾರವು ವಲಸೆ ಕಾರ್ಮಿಕರಿಗೆ ರೈಲಿನ ವ್ಯವಸ್ಥೆ ಮಾಡುತ್ತಿಲ್ಲ. ಇದು ಅಲ್ಲಿರುವ ವಲಸೆ ಕಾರ್ಮಿಕರಿಗೆ ಮತ್ತಷ್ಟು ತೊಂದರೆ ಉಂಟುಮಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದ ಅವರು, ಪಶ್ಚಿಮ ಬಂಗಾಳಕ್ಕೆ ಬೇರೆಡೆಯಿಂದ ರೈಲುಗಳಿಗೆ ಅವಕಾಶ ನೀಡದಿರುವುದರಿಂದ ರಾಜ್ಯಕ್ಕೆ ವಲಸೆ ಬಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ವಿವಿಧ ಸ್ಥಳಗಳಿಗೆ ವಲಸೆ ಕಾರ್ಮಿಕರನ್ನು ತಲುಪಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನಡೆಸುತ್ತಿರುವ 'ಶ್ರಮಿಕ್ ಸ್ಪೆಷಲ್' ರೈಲುಗಳ ಬಗ್ಗೆ ಗೃಹ ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವಲ್ಲಿ ಕೇಂದ್ರವು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿರುವ ವಲಸೆ ಕಾರ್ಮಿಕರು ಕೂಡ ಮನೆ ತಲುಪಲು ಉತ್ಸುಕರಾಗಿದ್ದಾರೆ ಮತ್ತು ಕೇಂದ್ರ ಸರ್ಕಾರವು ರೈಲು ಸೇವೆಗಳಿಗೆ ಸಹಕರಿಸುತ್ತಿದೆ. ಆದರೆ, ನಮಗೆ ಪಶ್ಚಿಮ ಬಂಗಾಳದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಪಶ್ಚಿಮ ಬಂಗಾಳಕ್ಕೆ ತಲುಪಲು ರೈಲುಗಳಿಗೆ ಅಲ್ಲಿನ ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಗೆ ಅನ್ಯಾಯವಾಗಿದೆ. ಇದು ಅವರಿಗೆ ಮತ್ತಷ್ಟು ಸಂಕಷ್ಟಗಳನ್ನು ಸೃಷ್ಟಿಸುತ್ತದೆ ಎಂದು ಶಾ ಆರೋಪಿಸಿದ್ದಾರೆ.

ABOUT THE AUTHOR

...view details