ಇಂದು ವಿಶ್ವ ದಾದಿಯರ ದಿನ. ಈ ವಿಶೇಷ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವಿರುದ್ಧ ಹೋರಾಡುತ್ತಿರುವ ದಾದಿಯರಿಗೆ ಶುಭ ಕೋರಿದ್ದಾರೆ. ಅಲ್ಲದೆ ದಾದಿಯರನ್ನು ಕೊಂಡಾಡುವ ಮೂಲಕ ಅವರೇ ನಿಜವಾದ ಹಿರೋಗಳು ಎಂದು ಹೊಗಳಿದ್ಧಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೃಹಸಚಿವ ಅಮಿತ್ ಷಾ, 'ಪ್ರಪಂಚಾದ್ಯಂತ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ದಾದಿಯರು ವೈದ್ಯಕೀಯ ವಲಯದ ಬೆನ್ನುಲುಬು ಇದ್ದಂತೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅವರ ಸೇವಾ ಮನೋಭಾವ ನಿಜಕ್ಕೂ ಅವಿಸ್ಮರಣೀಯ, ದಾದಿಯರ ಈ ತ್ಯಾಗ, ಶ್ರಮರಹಿತ ಸೇವೆಗೆ ಇಡೀ ದೇಶವೇ ವಂದಿಸಲು ಬಯಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.