ಕರ್ನಾಟಕ

karnataka

ETV Bharat / bharat

ಫಸ್ಟ್​​ ಕೇಳೋದನ್ನ ಕಲಿಯಿರಿ ಓವೈಸಿ ಸಾಹೇಬ್: ಅಮಿತ್​​ ಶಾ, ಓವೈಸಿ ನಡುವೆ ಮಾತಿನ ಸಮರ! - ಅಮಿತ್​ ಶಾ

ರಾಷ್ಟ್ರೀಯ ತನಿಖಾ ಸಂಸ್ಥೆ ಮಸೂದೆ ತಿದ್ದುಪಡಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸದ ಅಸಾವುದ್ದೀನ್​ ಓವೈಸಿ ನಡುವೆ ಮಾತಿನ ವಾಕ್ಸಮರ ನಡೆಸಿದೆ.

ಶಾ, ಓವೈಸಿ ನಡುವೆ ಮಾತಿನ ಸಮರ

By

Published : Jul 15, 2019, 7:42 PM IST

Updated : Jul 15, 2019, 11:07 PM IST

ನವದೆಹಲಿ:ರಾಷ್ಟ್ರೀಯ ತನಿಖಾ ಸಂಸ್ಥೆ( NIA) ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ AIMIM ಮುಖಂಡ ಹಾಗೂ ಸಂಸದ ಅಸಾವುದ್ದೀನ್​ ಓವೈಸಿ ನಡುವೆ ಮಾತಿಕ ಚಕಮಕಿ ನಡೆದಿದೆ.

ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್​ ರೆಡ್ಡಿ, ಹೈದರಾಬಾದ್​ ನಗರ ಭಯೋತ್ಪಾದನೆಯ ವಾಸ ಸ್ಥಳ ಎಂಬ ಹೇಳಿಕೆ ನೀಡುತ್ತಿದ್ದಂತೆ ಅಸಾವುದ್ದೀನ್​ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಈ ದೇಶಕ್ಕೆ ಸೇರಿದವನಾ ಅಥವಾ ಭಯೋತ್ಪಾದಕರೊಂದಿಗೆ ಇದ್ದವನಾ, ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಅಮಿತ್​ ಶಾ ಮಾತು

ಈ ವೇಳೆ ಮಧ್ಯಪ್ರವೇಶ ಮಾಡಿದ ಅಮಿತ್​​, ಮೊದಲು ಹೇಳುವುದನ್ನ ಕೇಳಿರಿ ಓವೈಸಿ ಸಾಹೇಬ್​, ಇದು ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ಬೆರಳು ಬೇರೆಯವರತ್ತ ತೋರಿಸಿದಾಗ ಉಳಿದ ನಾಲ್ಕು ಬೆರಳು ನಮ್ಮ ಕಡೆ ತೋರಿಸುತ್ತಿರುತ್ತವೆ ಎಂಬುದನ್ನ ಓವೈಸಿ ಮರೆಯಬಾರದು ಎಂದು ಇದೇ ವೇಳೆ ಅಮಿತ್​ ಶಾ ಸರಿಯಾಗೇ ಓವೈಸಿಗೆ ಟಾಂಗ್​ ಕೊಟ್ಟರು.

ಇನ್ನು ಅಮಿತ್​ ಶಾ ಹೇಳಿಕೆಗೆ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಓವೈಸಿ, ಬಿಜೆಪಿಗೆ ಯಾರು ಸಪೋರ್ಟ್​ ಮಾಡುವುದಿಲ್ಲವೋ ಅವರು ರಾಷ್ಟ್ರ ವಿರೋಧಿಗಳು. ದೇಶದಲ್ಲಿ ರಾಷ್ಟ್ರವಾದಿಗಳು ಹಾಗೂ ರಾಷ್ಟ್ರ ವಿರೋಧಿಗಳು ಎಂಬ ಶಾಪ್​ ಬಿಜೆಪಿಯಿಂದ ಓಪನ್​ ಆಗಿದೆ. ಸದನದಲ್ಲಿ ಬೆರಳು ತೋರಿಸಿ ಮಾತನಾಡುವ ಮೂಲಕ ಅವರು ನನಗೆ ಬೆದರಿಕೆ ಹಾಕಿದ್ದಾರೆ. ಅವರು ಓರ್ವ ಗೃಹ ಮಂತ್ರಿ ಹೊರತು ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.

Last Updated : Jul 15, 2019, 11:07 PM IST

ABOUT THE AUTHOR

...view details