ತಿರುವನಂತಪುರಂ(ಕೇರಳ): ಕಾಲೇಜು ಆವರಣದಲ್ಲಿ ಎಸ್ಎಫ್ಐ ಕಾರ್ಯಕರ್ತ ಅಖಿಲ್ ಮೇಲೆ ನಡೆದ ಹಲ್ಲೆ ವಿರೋಧಿಸಿ ಎಬಿವಿಪಿ ಹಾಗೂ ಬಿಜೆವೈಎಂ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.
ಪ್ರಕರಣ ಸಂಬಂಧ ಈಗಾಗಲೇ ಕೇರಳ ಪೊಲೀಸ್ 8 ಮಂದಿ ಆರೋಪಿಗಳಿಗೆ (ಎಸ್ಎಫ್ಐ ಕಾರ್ಯಕರ್ತರು) ಕೊಲೆ ಯತ್ನ ನೋಟಿಸ್ ಜಾರಿ ಮಾಡಿದೆ.
ಎಸ್ಎಫ್ಐ (ಸ್ಟುಡೆಂಟ್ ಫೆಡೆರೇಷನ್ ಆಫ್ ಇಂಡಿಯಾ) ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ತಿರುವನಂತಪುರಂ ವಿಶ್ವವಿದ್ಯಾಲಯ ಕಾಂಪಸ್ನಲ್ಲಿ ತೃತೀಯ ಬಿಎ ರಾಜ್ಯ ಶಾಸ್ತ್ರ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ಎದೆಗೆ ಹೊಡೆದು ಹಲ್ಲೆ ನಡೆಸಿದ ಘಟನೆ ಕಳೆದ ಶುಕ್ರವಾರ ನಡೆದಿದೆ. ಇನ್ನೂ ಹಲ್ಲೆಗೊಳಗಾದವ ಮತ್ತು ಅವನ ಹಲ್ಲೆಕೋರರು ಇಬ್ಬರೂ ಸಿಪಿಎಂ ವಿದ್ಯಾರ್ಥಿ ಸಂಘಟನೆಗೆ ಸೇರಿದವರು.
ಹಲ್ಲೆಗೊಳಗಾದ ಅಖಿಲ್ ಚಂದ್ರನ್ ಗಂಭೀರವಾಗಿದ್ದು, ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.