ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಲೈಂಗಿಕ ಕಾರ್ಯಕರ್ತೆ ಅನಾರೋಗ್ಯದಿಂದ ಸಾವು! - ದೆಹಲಿಯಲ್ಲಿ ಲೈಂಗಿಕ ಕಾರ್ಯಕರ್ತೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೈಂಗಿಕ ಕಾರ್ಯಕರ್ತೆವೋರ್ವರು ಮನೆಯಲ್ಲಿ ಸಾವನ್ನಪ್ಪಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಲೈಂಗಿಕ ಕಾರ್ಯಕರ್ತೆ ಅನಾರೋಗ್ಯದಿಂದ ಸಾವು

By

Published : Nov 22, 2019, 2:56 AM IST

ನವದೆಹಲಿ:ಸೆಂಟ್ರಲ್​ ದೆಹಲಿಯ ಕಮಲಾ ಮಾರ್ಕೆಟ್​​ನ ಜೆಬಿ ರೋಡ್​​ನಲ್ಲಿದ್ದ ಲೈಂಗಿಕ ಕಾರ್ಯಕರ್ತೆವೋರ್ವರು ಮನೆಯಲ್ಲಿ ದಿಢೀರ್​ ಆಗಿ ಸಾವನ್ನಪ್ಪಿದ್ದು, ಅನೇಕ ಅನುಮಾನ ಹುಟ್ಟುಹಾಕಿದೆ.

49 ವರ್ಷದ ಮಾನಿಷಿ ಎಂಬ ಮಹಿಳೆ ಗ್ವಾಲಿಯರ್​ನ ನಿವಾಸಿಯಾಗಿದ್ದು, ಮನೆಯಲ್ಲಿ ಏಕಾಏಕಿಯಾಗಿ ಸಾವಿಗೀಡಾಗಿದ್ದು,ಪ್ರಾಥಮಿಕ ವರದಿ ಪ್ರಕಾರ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ,ಮಾನಿಷಿ ಮಧ್ಯಪಾನದ ಅಮಲಿನಲ್ಲಿರುತ್ತಿದ್ದಳಂತೆ. ಪೊಲಿಯೋ ರೋಗದಿಂದ ಬಳಲುತ್ತಿದ್ದ ಈಕೆ ಕಳೆದ ಕೆಲ ವರ್ಷಗಳಿಂದ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಳು. ಇದೀಗ ದಿಢೀರ್​ ಆಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ABOUT THE AUTHOR

...view details