ನವದೆಹಲಿ:ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ನಡೆಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗೀತಾ ಅರೋರಾ ಅಲಿಯಾಸ್ ಸೋನು ಪಂಜಾಬನ್‌ಗೆ 24 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಆಕೆಯ ಸಹವರ್ತಿ ಸಂದೀಪ್ ಬೆಡ್ವಾಲ್ ಗೆ 20 ವರ್ಷ ಶಿಕ್ಷೆ ವಿಧಿಸಿದೆ.
ಅಪ್ರಾಪ್ತ ಬಾಲಕಿ ಅಪಹರಣ, ವೇಶ್ಯಾವಾಟಿಕೆ ಅಪರಾಧಿಗೆ 24 ವರ್ಷ ಕಠಿಣ ಸಜೆ - kidnapping and prostitution
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ನಡೆಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗೀತಾ ಅರೋರಾ ಅಲಿಯಾಸ್ ಸೋನು ಪಂಜಾಬನ್ ಅಂಬ ಅಪರಾಧಿಗೆ 24 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಆಕೆಯ ಸಹವರ್ತಿ ಸಂದೀಪ್ ಬೆಡ್ವಾಲ್‌ಗೆ 20 ವರ್ಷ ಶಿಕ್ಷೆ ವಿಧಿಸಿದೆ.
ಅಪ್ರಾಪ್ತ ಬಾಲಕಿ ಅಪಹರಣ, ವೇಶ್ಯಾವಾಟಿಕೆ ಆರೋಪಿಗೆ 24 ವರ್ಷ ಕಠಿಣ ಶಿಕ್ಷೆ
ಜುಲೈ 17 ರಂದು ದ್ವಾರಕಾ ನ್ಯಾಯಾಲಯದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಪ್ರೀತಮ್ ಸಿಂಗ್ ಅವರು ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಬಗ್ಗೆ ಮಾತನಾಡಿ, ಇಬ್ಬರು ಲೈಂಗಿಕ ದರೋಡೆಕೋರರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.
12 ವರ್ಷದ ಬಾಲಕಿಯನ್ನು ಸೆಪ್ಟೆಂಬರ್ 11, 2009 ರಂದು ಬೆಡ್ವಾಲ್ ಅಪಹರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದ ಸೋನು ಪಂಜಾಬನ್ ಸೇರಿದಂತೆ ಹಲವಾರು ಜನರಿಗೆ ಮಾರಾಟ, ಮರು ಮಾರಾಟ ಮಾಡಿದ್ದ.