ಲಂಡನ್:ಲಂಡನ್ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬ ಹಲವು ಮಂದಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಲಂಡನ್ ಬ್ರಿಡ್ಜ್ ಮೇಲೆ ಚಾಕು ಇರಿತ.. ಇಬ್ಬರ ಸಾವು, ಹಲವು ಮಂದಿಗೆ ಗಾಯ - ಮೆಟ್ರೋಪೊಲಿಟನ್ ಪೊಲೀಸರು
ಲಂಡನ್ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬ ಹಲವು ಮಂದಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ.
ಸದ್ಯ, ದಾಳಿ ನಡೆಸಿದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೆಟ್ರೋ ಪೊಲಿಟಿನ್ ಪೊಲೀಸರು ತಿಳಿಸಿದ್ದಾರೆ. ಥೇಮ್ಸ್ ನದಿ ಮೇಲಿರುವ ಲಂಡನ್ ಬ್ರಿಡ್ಜ್ ಮೇಲೆ ಶುಕ್ರವಾರ ಮಧ್ಯಾಹ್ನ ಸಮಯದಲ್ಲಿ ಬಿಳಿ ಕಾರಿನಲ್ಲಿ ಬಂದ ವ್ಯಕ್ತಿ ಜನರಿಗೆ ಚಾಕುವಿನಿಂದ ಇರಿದಿದ್ದಾನೆ. ಇದೇ ಜಾಗದಲ್ಲಿ 2017ರ ಜೂನ್ನಲ್ಲಿ ಭಯೋತ್ಪಾದಕ ದಾಳಿ ನಡೆದು, ಎಂಟು ಮಂದಿ ಮೃತಪಟ್ಟಿದ್ದರು.
ಘಟನೆ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದರ ಬಗ್ಗೆ ಎಲ್ಲ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೆಟ್ರೋ ಪೊಲಿಟನ್ ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪ್ಯಾರಿಸ್ನ ರೈಲ್ವೆ ಸ್ಟೇಷನ್ ಕೆಲ ಕಾಲ ತೆರವುಗೊಳಿಸಲಾಗಿತ್ತು.