ಸಿರ್ಸಾ( ಹರಿಯಾಣ): ಬಟಿಂಡಾ ಪೊಲೀಸರ ಮೇಲೆ ಶಂಕಿತ ಡ್ರಗ್ ಕಳ್ಳಸಾಗಣೆದಾರರು ಹಾಗೂ ಹಳ್ಳಿಗರು ದಾಳಿ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದೇಸು ಯೋಧಾ ಹಳ್ಳಿಯ ಮೇಲೆ ದಾಳಿ ಮಾಡಿದ್ದರು.
ಸಿರ್ಸಾ( ಹರಿಯಾಣ): ಬಟಿಂಡಾ ಪೊಲೀಸರ ಮೇಲೆ ಶಂಕಿತ ಡ್ರಗ್ ಕಳ್ಳಸಾಗಣೆದಾರರು ಹಾಗೂ ಹಳ್ಳಿಗರು ದಾಳಿ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದೇಸು ಯೋಧಾ ಹಳ್ಳಿಯ ಮೇಲೆ ದಾಳಿ ಮಾಡಿದ್ದರು.
ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು, ಶಂಕಿತ ಮಾದಕ ವಸ್ತು ಕಳ್ಳಸಾಗಣೆದಾರರು ಪೊಲೀಸರ ಮೇಲೆ ತಿರುಗಿ ಬಿದ್ದರು. ಪೊಲೀಸ್ ತಂಡದ ಮೇಲೆ ದಾಳಿ ಮಾಡಿದರು. ಈ ಘರ್ಷಣೆಯಲ್ಲಿ 7 ಮಂದಿ ಪೇದೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಬುಧವಾರ ಈ ಘಟನೆ ನಡೆದಿದ್ದು, ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನ ರವಾನಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.