ಮುಂಬೈ:ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಕಡೆಯಿಂದ ಭಾರತೀಯರ ಹೆಸರಿನ ಹಲವು ನಕಲಿ ಖಾತೆಗಳನ್ನು ತೆರೆಯಲಾಗುತ್ತಿದೆ. ಈ ನಕಲಿ ಖಾತೆಗಳ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಶೇರ್ ಮಾಡಲಾಗುತ್ತಿದ್ದು, ಇಂತಹ ಖಾತೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಾರಾಷ್ಟ್ರ ಸೈಬರ್ ಠಾಣೆಯ ಸ್ಪೆಷಲ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.
ನಕಲಿ ಖಾತೆ ಮೂಲಕ ಪಾಕ್ನಿಂದ ಪ್ರಚೋದನಕಾರಿ ಸಂದೇಶ ರವಾನೆ... ಎಸ್ಐಜಿಪಿ ಕಿವಿಮಾತೇನು? - Special Inspector General of Police, Brijesh Singh
ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕಿವಿಮಾತು ಹೇಳಿರುವ ಮಹಾರಾಷ್ಟ್ರ ಸೈಬರ್ ಠಾಣೆಯ ಎಸ್ಐಜಿಪಿ ಬ್ರಿಜೇಶ್ ಸಿಂಗ್, ಜನರು ತಮ್ಮ ಮೊಬೈಲ್ಗೆ ಸಂದೇಶಗಳು ಬಂದ ತಕ್ಷಣ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ದೇಶ, ದೇಶದ ಸೇನೆ ಹಾಗೂ ಪೊಲೀಸ್ ಇಲಾಖೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆ ಬರುವಂತಹ ಸಂದೇಶಗಳನ್ನು ಬೇರೆಯವರೊಂದಿಗೆ ಶೇರ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಬೇಕು ಎಂದು ಭಾರತೀಯ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕಿವಿಮಾತು ಹೇಳಿದ್ದಾರೆ.
ಕಾಶ್ಮೀರದ ಜನರ ಮೇಲೆ ಶೋಷಣೆ ಮಾಡಲಾಗುತ್ತಿದೆ ಎಂಬುದನ್ನು ಬಿಂಬಿಸುವ ನಕಲಿ ವಿಡಿಯೋಗಳನ್ನು ಹಂಚಲಾಗುತ್ತಿದೆ. ಇದರೊಂದಿಗೆ ಅನಗತ್ಯ ಫೋಟೋಗಳನ್ನು ವಾಸ್ತವ ಸ್ಥಿತಿಗತಿಗೆ ವಿರುದ್ಧವಾಗಿ ಬಳಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಅಧಿಕೃತವಾಗಿ ಪರಿಶೀಲನೆಗೊಂಡಿರುವ ಖಾತೆಗಳಿಂದಲೂ ಇಂತಹ ನಕಲಿ ಸುದ್ದಿಗಳ ಬಿತ್ತರವಾಗುತ್ತಿವೆ ಎಂದು ಬ್ರಿಜೇಶ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕಿವಿಮಾತು ಹೇಳಿರುವ ಬ್ರಿಜೇಶ್ ಸಿಂಗ್, ಜನರು ಇಂತಹ ಸಂದೇಶಗಳು ಬಂದ ತಕ್ಷಣ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ದೇಶ, ದೇಶದ ಸೇನೆ ಹಾಗೂ ಪೊಲೀಸ್ ಇಲಾಖೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆ ಬರುವಂತಹ ಸಂದೇಶಗಳನ್ನು ಬೇರೆಯವರೊಂದಿಗೆ ಶೇರ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.