ಚಂಡೀಗಢ(ಪಂಜಾಬ್): ನಾಲ್ಕು ರಾಜ್ಯಗಳಲ್ಲಿ ಸುದೀರ್ಘ 2 ತಿಂಗಳುಗಳ ಕಾಲ 1,500 ಕಿಲೋ ಮೀಟರ್ ಸುತ್ತಿದ ಪೊಲೀಸರು 3 ಪ್ರಮುಖ ದರೋಡೆಕೋರರನ್ನು ಸೇರಿದಂತೆ ಒಟ್ಟು 7 ಜನರನ್ನ ಬಂಧಿಸಲಾಗಿದೆ ಎಂದು ಪಂಜಾಬ್ ರಾಜ್ಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ಸುಳಿವು ಸಿಕ್ಕ ನಂತರ ಮೂವರು ದರೋಡೆಕೋರನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಸೊಜತ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿನ್ಕರ್ ಗುಪ್ತಾ ತಿಳಿಸಿದ್ದಾರೆ.
ಅಮೆರಿಕ ಮೂಲದ ಪವಿಟ್ಟರ್ ಸಿಂಗ್ ನೇತೃತ್ವದ ಗ್ಯಾಂಗ್‌ನ ಸದಸ್ಯರಾದ ಹರ್ಮನ್ ಭುಲ್ಲರ್, ಬಲರಾಜ್ ಸಿಂಗ್ ಮತ್ತು ಹರ್ವಿಂದರ್ ಸಂಧು ಎಂಬ ಮೂವರು ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಸ್ಥಳಗಳನ್ನು ಬದಲಾಯಿಸಿಕೊಂಡು ಮಾರುವೇಷದಲ್ಲಿ ತಿರುಗಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಜನವರಿ 28 ರಂದು ಅಮೃತಸರದಿಂದ ಪ್ರಾರಂಭವಾದ ಅಪರಾಧಿಗಳ ಬೆನ್ನಟ್ಟುವಿಕೆು ಮಾರ್ಚ್ 1 ರಂದು ನಾಲ್ಕು ರಾಜ್ಯಗಳ ಪರಿಪೂರ್ಣ ಅಂತಾರಾಜ್ಯ ಸಮನ್ವಯ ಮತ್ತು ಸಹಕಾರದ ಪರಿಣಾಮವಾಗಿ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ.
ಸುಲಿಗೆ, ಕೊಲೆ ಯತ್ನ, ಕೊಲೆ, ಗಲಭೆ ಮುಂತಾದ ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎಂದು ಅವರು ಹೇಳಿದರು. ಭುಲ್ಲರ್ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಬಲರಾಜ್ ಸಿಂಗ್ 10 ಮತ್ತು ಸಾಂಧು ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.