ಹೈದರಾಬಾದ್:ಕೊರೊನಾ ಸೋಂಕು ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಅವರ ಕಚೇರಿಗೆ ವಕ್ಕರಿಸಿದ್ದು, ಇಬ್ಬರು ಚಾಲಕರು, ಮೂವರು ಗನ್ ಮ್ಯಾನ್ಗಳು ಮತ್ತು ಸಚಿವರ ಇಬ್ಬರು ಸಹಾಯಕರು ಸೋಂಕಿಗೆ ತುತ್ತಾಗಿದ್ದಾರೆ.
ಸಚಿವ ರಾಜೇಂದರ್ ಅವರಿಗೂ ಕೋವಿಡ್ ಪರೀಕ್ಷೆ ನಡೆಸಿದ್ದು, ಯಾವುದೇ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ಸಚಿವರು ಕಚೇರಿಗೆ ಹಾಜರಾಗದೆ ಅವರ ನಿವಾಸದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.