ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಏಳು ಜನರ ಮೇಲೆ ಆ್ಯಸಿಡ್​ ದಾಳಿ - ಮಹಾರಾಷ್ಟ್ರದ ಭಿವಾಂಡಿಯಲ್ಲಿ ಆಸಿಡ್​ ದಾಳಿ

ಎರಡು ಗುಂಪುಗಳ ನಡುವಿನ ಘರ್ಷಣೆ ಉದ್ವಿಗ್ನಗೊಂಡ ಪರಿಣಾಮ ಏಳು ಜನರ ಮೇಲೆ ಆ್ಯಸಿಡ್​ ದಾಳಿ ಮಾಡಿದ ಘಟನೆ ಭಿವಾಂಡಿ ನಗರದ ಸಾಯಿನಾಥ್ ಎಂಬಲ್ಲಿ ಜರುಗಿದೆ.

Seven suffer burn injures in acid attack in Maharashtra's Bhiwandi
ಮಹಾರಾಷ್ಟ್ರದ ಭಿವಾಂಡಿಯಲ್ಲಿ 7 ಜನರ ಮೇಲೆ ಆಸಿಡ್​ ದಾಳಿ

By

Published : Oct 10, 2020, 11:54 AM IST

ಭಿವಾಂಡಿ (ಮಹಾರಾಷ್ಟ್ರ):ಎರಡು ಗುಂಪುಗಳ ನಡುವಿನ ಕಲಹ ವಿಕೋಪಕ್ಕೆ ತಿರುಗಿದ ಪರಿಣಾಮ ಮಹಾರಾಷ್ಟ್ರದ ಭಿವಾಂಡಿಯಲ್ಲಿ 7 ಜನರ ಮೇಲೆ ಆ್ಯಸಿಡ್​ ದಾಳಿ ಮಾಡಲಾಗಿದೆ.

ಭಿವಾಂಡಿ ನಗರದ ಸಾಯಿನಾಥ್ ನಗರದಲ್ಲಿ ಘಟನೆ ನಡೆದಿದೆ. ಆ್ಯಸಿಡ್​ ದಾಳಿಗೊಳಗಾದ ಜನರಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರ ತಂಡ ಭೇಟಿ ನೀಡಿದ್ದು, ಘಟನೆಗೆ ಕಾರಣರಾದವರ ಶೋಧ ಕಾರ್ಯ ಆರಂಭಿಸಿದ್ದಾರೆ.

ABOUT THE AUTHOR

...view details