ಪೂರ್ವ ಗೋದಾವರಿ(ಆಂಧ್ರ ಪ್ರದೇಶ):ಬ್ರೇಕ್ ಫೇಲ್ ಆದ ಪರಿಣಾಮವ್ಯಾನ್ವೊಂದು ಪಲ್ಟಿಯಾಗಿ ಏಳು ಜನ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಬೆಟ್ಟದಿಂದ ಕೆಳಕ್ಕುರುಳಿದ ವ್ಯಾನ್: 7 ಮಂದಿ ಸಾವು, ಹಲವರಿಗೆ ಗಾಯ - ಪೂರ್ವ ಗೋಧಾವರಿಯಲ್ಲಿ ವ್ಯಾನ್ ಪಲ್ಟಿ
ಮದುವೆಗೆ ತೆರಳಿದ್ದ ಜನರು ವಾಪಸ್ ಬರುವ ವೇಳೆ ವ್ಯಾನ್ನ ಬ್ರೇಕ್ ಫೇಲ್ ಆಗಿ ಬೆಟ್ಟದಿಂದ ಕೆಳಕ್ಕುರುಳಿದ ಪರಿಣಾಮ 7 ಜನ ಅಸುನೀಗಿದ್ದಾರೆ.
ಬೆಟ್ಟದಿಂದ ಕೆಳಕ್ಕುರುಳಿದ ವ್ಯಾನ್
ಪೂರ್ವ ಗೋದಾವರಿ ಜಿಲ್ಲೆಯ ತಂತಿಕೊಂಡಾ ಘಾಟ್ ರಸ್ತೆಯಲ್ಲಿರುವ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಬಳಿ ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಮದುವೆಗೆ ತೆರಳಿದ್ದ ಮಂದಿ ವ್ಯಾನ್ನಲ್ಲಿ ವಾಪಸ್ ಬರುತ್ತಿದ್ದ ವೇಳೆ ಬ್ರೇಕ್ ಫೇಲ್ ಆದ ಪರಿಣಾಮ ವ್ಯಾನ್ ಬೆಟ್ಟದಿಂದ ಕೆಳಕ್ಕುರುಳಿದೆ.
ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಗೋಕವರಂ ಮಂಡಲದ ಠಾಕೂರ್‌ಪಾಲೆಂ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.