ದೆಹಲಿ: ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ಸೆಪ್ಟಂಬರ್ 14ರಿಂದ 17ರವರೆಗೆ ಸೇವಾ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೋದಿ ಜನ್ಮದಿನ: ಬಿಜೆಪಿಯಿಂದ ಸೇವಾ ಸಪ್ತಾಹ ಅಭಿಯಾನಕ್ಕೆ ಶಾ ಚಾಲನೆ - ಪ್ರಧಾನಿ ಮೋದಿ ಜನ್ಮದಿನ
ಪ್ರಧಾನಿ ಮೋದಿ ಅವರ ಜನ್ಮದಿನ ಅಂಗವಾಗಿ ದೇಶದಾದ್ಯಂತ ಇಂದಿನಿಂದ ಸೇವಾ ಸಪ್ತಾಹ ಅಭಿಯಾನಕ್ಕೆ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಮೋದಿ ಜನ್ಮ ದಿನದ ಅಂಗವಾಗಿ ಸೇವಾ ಸಪ್ತಾಹ
ದೆಹಲಿಯ ಏಮ್ಸ್ನಲ್ಲಿ ದಾಖಲಾಗಿದ್ದ ರೋಗಿಗಳಿಗೆ ಹಣ್ಣು ವಿತರಿಸಿ ಬಳಿಕ ಕಸ ಗುಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೇವಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ಜೀವನ ಮುಡಿಪಾಗಿಟ್ಟಿದ್ದು, ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಅವರ ಜನ್ಮದಿನದ ಅಂಗವಾಗಿ ಇಂದಿನಿಂದ ಸೇವಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ದೇಶದಾದ್ಯಂತ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರು ಸಪ್ತಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರಮದಾನವನ್ನು ಮಾಡಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.