ಕರ್ನಾಟಕ

karnataka

ETV Bharat / bharat

ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮ​ ಇಲ್ಲ: ಸೆರಂ ಸ್ಪಷ್ಟನೆ - Serum Institute of India, the world's largest vaccine manufacturer

ಕೋವಿಶೀಲ್ಡ್​ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯ ಆರೋಪವನ್ನು ತಳ್ಳಿಹಾಕಿರುವ ಸೆರಂ ಕಂಪನಿ, ಈ ಆರೋಪ ದುರುದ್ದೇಶಪೂರಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಹೇಳಿದೆ.

COVID-19 vaccine
ಕೊರೊನಾ ಲಸಿಕೆ

By

Published : Dec 1, 2020, 4:50 PM IST

ನವದೆಹಲಿ: ಇಂಗ್ಲೆಂಡ್​​​ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಿಕೆ ಸಂಸ್ಥೆ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆ (ಕೋವಿಶೀಲ್ಡ್) ವ್ಯಕ್ತಿಯ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟುಮಾಡುತ್ತದೆ ಎಂಬ ಆರೋಪವನ್ನು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೆರಂ​​ ಇನ್​​​ಸ್ಟಿಟ್ಯೂಟ್​ ಆಫ್​ ಇಂಡಿಯಾ ತಳ್ಳಿಹಾಕಿದೆ.

ಬ್ರಿಟನ್​ನಲ್ಲಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯನ್ನು ಭಾರತದಲ್ಲಿ ಮಹಾರಾಷ್ಟ್ರದ ಪುಣೆಯ ಸೆರಂ ಕಂಪನಿಯು ಉತ್ಪಾದಿಸುತ್ತಿದ್ದು, ಮಾನವರ ಮೇಲೆ ಲಸಿಕೆ ಪ್ರಯೋಗ ನಡೆಸುತ್ತಿದೆ. ಸ್ವಯಂಪ್ರೇರಿತರಾಗಿ ಕೋವಿಶೀಲ್ಡ್​ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ತಮಿಳುನಾಡಿನ ಅಣ್ಣಾ ನಗರ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಲಸಿಕೆಯು ಮನುಷ್ಯನ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಮ್ಮ ಆರೋಗ್ಯದಲ್ಲಾದ ಏರುಪೇರಿನ ಅನುಭವದ ಆಧಾರದ ಮೇಲೆ ಆರೋಪಿಸಿ, 5 ಕೋಟಿ ರೂ. ಪರಿಹಾರ ಕೇಳಿದ್ದರು.

ಆದರೆ ಈ ಆರೋಪ ದುರುದ್ದೇಶಪೂರಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಸೆರಂ ಕಂಪನಿ ಹೇಳಿದೆ. ನಾವು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( DCGI)ಗೆ ಸಂಬಂಧಪಟ್ಟ ಎಲ್ಲಾ ವರದಿ ಹಾಗೂ ಡೇಟಾಗಳನ್ನು ಕಳುಹಿಸಿ ಒಪ್ಪಿಗೆ ಪಡೆದ ಬಳಿಕವೇ ಲಸಿಕೆ ಪ್ರಯೋಗ ನಡೆಸುತ್ತಿದ್ದೇವೆ. ಲಸಿಕೆಯು 'ಸುರಕ್ಷಿತ' ಎಂದು ಸಾಬೀತಾಗುವವರೆಗೂ ನಾವು ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವುದಿಲ್ಲ ಎಂದು ಸೆರಂ ಕಂಪನಿ ಸ್ಪಷ್ಟಪಡಿಸಿದೆ.

ABOUT THE AUTHOR

...view details