ಕರ್ನಾಟಕ

karnataka

By

Published : May 13, 2020, 10:10 AM IST

ETV Bharat / bharat

ಮೋದಿ ಆರ್ಥಿಕ ಪ್ಯಾಕೇಜ್‌ಗೆ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಅದರ ಪರಿಣಾಮ ಮುಂಬೈ ಷೇರು ಮಾರುಕಟ್ಟೆ ಮೇಲೂ ಬಿದ್ದಿದೆ.

mumbai sensex
mumbai sensex

ಮುಂಬೈ:ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್​ಗೆ ಮುಂಬೈ ಷೇರು ಮಾರುಕಟ್ಟೆ ಪುಟಿದೆದ್ದಿದ್ದು, ಆರಂಭದ ವಹಿವಾಟಿನಲ್ಲೇ ಏರಿಕೆ ದಾಖಲಿಸಿದೆ.

ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿ ನಿನ್ನೆ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಇದರ ಧನಾತ್ಮಕ ಪರಿಣಾಮ ಮುಂಬೈ ಷೇರು ಮಾರುಕಟ್ಟೆ ಮೇಲೆ ಬಿದ್ದಿದೆ. 935.42 ಅಂಕಗಳ ಏರಿಕೆಯೊಂದಿಗೆ ಬಿಎಸ್‌ಇ ಸೆನ್ಸೆಕ್ಸ್‌ 32,306.54ರಲ್ಲಿ ವಹಿವಾಟು ನಡೆಸುತ್ತಿದ್ದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡ 387.65 ಅಂಕಗಳ ಏರಿಕೆ ಕಂಡು 9,584.20 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.

ಎಚ್​​ಡಿಎಫ್​ಸಿ, ಐಸಿಐಸಿಐ, ರಿಲಯನ್ಸ್​​​ ಸೇರಿದಂತೆ ಅನೇಕ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ABOUT THE AUTHOR

...view details