ಕರ್ನಾಟಕ

karnataka

ETV Bharat / bharat

’ಅಯ್ಯೋ ನನ್ನ ಹಣ ಹೋಯ್ತು.... ಮುಂದೇನು’?  ಷೇರುಪೇಟೆಯಲ್ಲಿ ದಾಖಲೆಯ 2,200  ಅಂಕ ಕುಸಿತ!

ಮಹಾಮಾರಿ ಕೊರೊನಾ ವೈರಸ್​ಗೆ ಮುಂಬೈ ಷೇರು ಮಾರುಕಟ್ಟೆ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಒಂದೇ ದಿನ ದಾಖಲೆಯ 2 ಸಾವಿರ ಅಂಕ ಕುಸಿತುಗೊಂಡಿದೆ. ಇದರಿಂದ ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ.

mumbai sensex
mumbai sensex

By

Published : Mar 9, 2020, 1:30 PM IST

ಮುಂಬೈ: ಮಹಾಮಾರಿ ಕೊರೊನಾ ಭೀತಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್​ ಆಗಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಪರಿಣಾಮ ಮುಂಬೈ ಷೇರು ಪೇಟೆಯಲ್ಲಿ ಬರೋಬ್ಬರಿ 2,200 ಸಾವಿರ ಅಂಕ ಇಳಿಕೆಯಾಗಿದೆ.

ಮುಂಬೈ ಷೇರು ಪೇಟೆ ಆರಂಭಗೊಳ್ಳುತ್ತಿದ್ದಂತೆ ಬರೋಬ್ಬರಿ 2 ಸಾವಿರ ಅಂಕ ಇಳಿಕೆಯಾಗಿದ್ದು, 35,337.66ರಲ್ಲಿ ವಹಿವಾಟು ನಡೆಸಿದ್ರೆ, ನಿಫ್ಟಿ ಕೂಡ ಬರೋಬ್ಬರಿ 625.58 ಅಂಕ ಕುಸಿತಗೊಂಡು 10,363ಯಲ್ಲಿ ವಹಿವಾಟು ನಡೆಸಿದೆ.

ದಾಖಲೆ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದಂತೆ ಕಳೆದ 10 ವರ್ಷದಲ್ಲಿ ಇದೇ ಮೊದಲ ಸಲ ರಿಲಯನ್ಸ್​ ಷೇರುಗಳ ಬೆಲೆಯಲ್ಲಿ ಶೇ. 11ರಷ್ಟು ಇಳಿಕೆಯಾಗಿದೆ. ಷೇರುದಾರರು ಕೆಲವೇ ಕ್ಷಣಗಳಲ್ಲಿ ಬರೋಬ್ಬರಿ 10 ಲಕ್ಷ ಕೋಟಿ ರೂ ಗೂ ಹೆಚ್ಚು ಮೊತ್ತದ ಹಣವನ್ನ ಕಳೆದುಕೊಂಡಿದ್ದಾರೆ.

ಪ್ರಮುಖವಾಗಿ ರಿಲಯನ್ಸ್, ಇಂಡಸ್​ ಬ್ಯಾಂಕ್​, ಟಾಟಾ ಸ್ಟೀಲ್ಸ್​, ಐಸಿಸಿಐ ಬ್ಯಾಂಕ್​, ಇನ್ಪೋಸಿಸ್​ ಸೇರಿದಂತೆ ಪ್ರಮುಖ ಷೇರುಗಳಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ.

ABOUT THE AUTHOR

...view details