ಮುಂಬೈ:ಜಾಗತಿಕ ಷೇರುಗಳ ಖರೀದಿ ಹಾಗೂ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಮಾತುಕತೆಯ ಸಕಾರಾತ್ಮಕ ಬೆಳವಣಿಗೆ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಇಂದು ದಾಖಲೆಯ 500 ಅಂಕಗಳ ಜಿಗಿತ ಕಂಡಿದೆ.
ದಾಖಲೆ ಬರೆದ ಮುಂಬೈ ಷೇರುಪೇಟೆ... 12 ಸಾವಿರ ಗಡಿ ದಾಟಿದ ನಿಫ್ಟಿ! - ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ
ಮುಂಬೈ ಷೇರು ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ಕೆಲವೊಂದು ಷೇರುಗಳ ಬೆಲೆ ಗಗನಮುಖಿಯಾಗಿವೆ.
ಸೂಚ್ಯಂಕ 500 ಅಂಕಗಳ ದಾಖಲೆ ಏರಿಕೆಯೊಂದಿಗೆ 40,857.73 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ. ಲೋಹ ಮತ್ತು ರಿಯಲ್ ಎಸ್ಟೇಟ್ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದರ ಜತೆಗೆ ಬ್ಯಾಂಕಿಂಗ್ ಹಾಗೂ ಟೆಲಿಕಾಂ ಕ್ಷೇತ್ರದ ಷೇರುಗಳ ಖರೀದಿಗೆ ಗ್ರಾಹಕರು ಮುಂದಾಗಿದ್ದು ಕಂಡು ಬಂದಿದೆ.
ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಸಹ 159.35 ಅಂಕಗಳೊಂದಿಗೆ ವಹಿವಾಟು ನಡೆಸಿ ದಾಖಲೆಯ 12,074 ಅಂಕ ಗಳಿಕೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ. ಹೀಗಾಗಿ ಭಾರ್ತಿ ಏರ್ಟೆಲ್, ಇನ್ಫೋಸಿಸ್, ಸನ್ ಫಾರ್ಮಾ, ವೇದಾಂತ್ ಹಾಗೂ ಆರ್ಐಎಲ್ ಷೇರುಗಳ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ.