ಕರ್ನಾಟಕ

karnataka

ETV Bharat / bharat

ಸತತ ಏರಿಕೆ ದಾಖಲಿಸಿದ್ದ  ಸೆನ್ಸೆಕ್ಸ್ 200 ಅಂಕ ಕುಸಿತ

ಇಂಡಸ್​ಇಂಡ್​ ಬ್ಯಾಂಕ್​​ ಅತೀ ಹೆಚ್ಚು ನಷ್ಟ ಅನುಭವಿಸಿದೆ. ಇದರ ಬಳಿಕದ ಸ್ಥಾನದಲ್ಲಿ ಹೆಚ್​​ಎಫ್​ಸಿ, ಕೋಟಕ್​ ಬ್ಯಾಕ್, ಆ್ಯಕ್ಸಿಸ್ ಬ್ಯಾಂಕ್​ ಮತ್ತು ಐಸಿಐಸಿಐ ಬ್ಯಾಂಕ್ ಇವೆ. ಮತ್ತೊಂದೆಡೆ ಎಂ&ಎಂ, ಸನ್ ಫಾರ್ಮಾ, ಇನ್ಫೋಸಿಸ್, ಹೆಚ್​ಯುಎಲ್​ ಮತ್ತು ನೆಸ್ಲೆ ಇಂಡಿಯಾ ಲಾಭದೊಂದಿಗೆ ವಹಿವಾಟು ಆರಂಭಿಸಿವೆ.

sensex-declines-over-200-pts-in-early-trade-nifty-slips-below-12700
ಮುಂಬೈ ಷೇರು ಸೂಚ್ಯಂಕ

By

Published : Nov 12, 2020, 1:11 PM IST

ಮುಂಬೈ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಬೆನ್ನಲ್ಲೆ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 200 ಅಂಕ ಕೆಳಗಿಳಿದು ಆತಂಕ ಸೃಷ್ಟಿಸಿದೆ.

ಮಾರುಕಟ್ಟೆ ಮಾನದಂಡ ಬಿಎಸ್‌ಇ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 226.79 ಅಂಕಗಳೊಂದಿಗೆ ಅಥವಾ ಶೇ.0.52ರಷ್ಟು ಇಳಿಕೆ ಕಂಡು 43,366.88ಕ್ಕೆ ತಲುಪಿದೆ.

ಬ್ರಾಡರ್ ಎನ್​​​​ಎಸ್​​​​ಇ ನಿಫ್ಟಿ ಸಹ 60 ಅಂಕಗಳ ಅಥವಾ ಶೇ.0.47ರಷ್ಟು ಕುಸಿತ ಕಂಡು 12,689.15ಕ್ಕೆ ತಲುಪಿದೆ.

ಈ ಕುಸಿತದ ಹಾದಿಯಲ್ಲಿ ಇಂಡಸ್​ಇಂಡ್​ ಬ್ಯಾಂಕ್​​ ಅತೀ ಹೆಚ್ಚು ನಷ್ಟ ಅನುಭವಿಸಿದೆ. ಇದರ ಬಳಿಕದ ಸ್ಥಾನದಲ್ಲಿ ಹೆಚ್​​ಎಫ್​ಸಿ, ಕೋಟಕ್​ ಬ್ಯಾಕ್, ಆ್ಯಕ್ಸಿಸ್ ಬ್ಯಾಂಕ್​ ಮತ್ತು ಐಸಿಐಸಿಐ ಬ್ಯಾಂಕ್ ಇವೆ. ಮತ್ತೊಂದೆಡೆ ಎಂ&ಎಂ, ಸನ್ ಫಾರ್ಮಾ, ಇನ್ಫೋಸಿಸ್, ಹೆಚ್​ಯುಎಲ್​ ಮತ್ತು ನೆಸ್ಲೆ ಇಂಡಿಯಾ ಲಾಭದೊಂದಿಗೆ ವಹಿವಾಟು ಆರಂಭಿಸಿವೆ.

ಈ ಹಿಂದಿನ ಮಾರುಕಟ್ಟೆಯೂ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 316 ಅಂಕ ಅಥವಾ ಶೇ 0.73ರಷ್ಟು ಏರಿಕೆಯಾಗಿ 43,594 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 118 ಅಂಕ ಅಥವಾ ಶೇ 0.93ರಷ್ಟು ಏರಿಕೆಯಾಗಿ 12,749 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ಕೇಂದ್ರ ಸರ್ಕಾರ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರೊಡಕ್ಷನ್ ಲಿಂಕ್ಡ್​ ಇನ್ಸೆಂಟಿವ್ (ಪಿಎಲ್​ಇ) ಯೋಜನೆಗೆ ಅನುಮೋದನೆ ನೀಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 6,207.19 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿ ಉಳಿದಿದ್ದಾರೆ.

ABOUT THE AUTHOR

...view details