ಮುಂಬೈ:ಬಜೆಟ್ ದಿನ 1000 ಅಂಕಕ್ಕೂ ಹೆಚ್ಚು ಕುಸಿತ ಕಂಡು ಸರಿ ಸುಮಾರು ನಾಲ್ಕು ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಿದ್ದ ಷೇರುಪೇಟೆ ಇಂದೂ ಅದೇ ಹಾದಿಯಲ್ಲಿ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಬಜೆಟ್ ಎಫೆಕ್ಟ್: ಷೇರುಪೇಟೆಯಲ್ಲಿ ಮುಂದುವರಿದ ಅನಿಶ್ಚಿತತೆ! - ಸೂಚ್ಯಂಕದಲ್ಲಿ ಏರುಪೇರು
ಮುಂಬೈ ಷೇರು ಸೂಚ್ಯಂಕದಲ್ಲಿ ಕರಿಡಿ-ಗೂಳಿ ಅಬ್ಬರ ಜೋರಾಗಿದ್ದು, ಬಜೆಟ್ ಮಂಡನೆ ದಿನ ಷೇರುದಾರರಿಗೆ ಸಖತ್ ಏಟು ನೀಡಿದ್ದ ಷೇರುಪೇಟೆ ಇಂದು ಅದೇ ಹಾದಿಯಲ್ಲಿ ಮುಂದುವರೆದದಿದೆ.
ಷೇರುಪೇಟೆ
ಮುಂಬೈ ಷೇರುಪೇಟೆ ಆರಂಭದಲ್ಲೇ 125 ಕ್ಕೂ ಹೆಚ್ಚು ಅಂಕಗಳನ್ನ ಕಳೆದುಕೊಂಡು ನೀರಸ ಆರಂಭ ಕಂಡಿತ್ತು. 42 ಸಾವಿರ ದಾಟಿ ಮುನ್ನುಗ್ಗುತ್ತಿದ್ದ ಮಾರುಕಟ್ಟೆ ಬಜೆಟ್ ದಿನ ಸಾವಿರ ಅಂಕ ಕಳೆದುಕೊಂಡು ಕಂಗಾಲಾಗಿತ್ತು. ಆ ಮೂಲಕ 39653 ಅಂಕಗಳಿಗೆ ಇಳಿದಿತ್ತು. ಈಗ ಪೇಟೆಯಲ್ಲಿ ಏರಿಳಿಕೆ ದಾಖಲಾಗುತ್ತಿದೆ.
ನಿಫ್ಟಿ 10 ಗಂಟೆ ವೇಳೆ ಅಲ್ಪ ಏರಿಕೆ ದಾಖಲಿಸಿ, ತಾಕಲಾಟದಲ್ಲೇ ವ್ಯವಹಾರ ಮುಂದುವರೆಸಿದೆ.