ಕರ್ನಾಟಕ

karnataka

ETV Bharat / bharat

ಇಂದು ವಾರದ ನಿಫ್ಟಿಯ ಕೊನೆ ದಿನ: ಸೆನ್ಸೆಕ್ಸ್​ನಲ್ಲಿ ಚೇತರಿಕೆ - lockdown

ಇಂದು ವಾರದ ನಿಫ್ಟಿಯ ಕೊನೆಯ ದಿನವಾಗಿದ್ದು ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ.

bse
ಬಿಎಸ್​ಇ

By

Published : Apr 9, 2020, 10:55 AM IST

ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ ಹಾಗೂ ನಿಫ್ಟಿ ಶೇಕಡಾ ಮೂರರಷ್ಟು ಜಿಗಿತ ಕಂಡಿದೆ. ಹಣಕಾಸು, ಮಾಹಿತಿ ತಂತ್ರಜ್ಞಾನ ಹಾಗೂ ಎಫ್​ಎಂಸಿಜಿಯ ಷೇರುಗಳು ಕೊರೊನಾ ಸೋಂಕಿನ ಉಪಟಳ ಜಗತ್ತಿನಲ್ಲಿ ತೀವ್ರವಾಗಿರುವ ವೇಳೆಯಲ್ಲೇ ಹೆಚ್ಚಿನ ವಹಿವಾಟು ನಡೆಸಿ ಭರವಸೆ ಮೂಡಿಸಿವೆ. ಪ್ರಮುಖ ಮೂವತ್ತು ಕಂಪನಿಗಳ ಬಿಎಸ್​ಇ ಸೆನ್ಸೆಕ್ಸ್ 905 ಪಾಯಿಂಟ್​ಗಳಷ್ಟು ಏರಿಕೆ ಕಂಡಿದ್ದು 30,798ಕ್ಕೆ ತಲುಪಿದೆ. ನಿಫ್ಟಿ 50 ಈಗ 265 ಪಾಯಿಂಟ್​ಗಳಷ್ಟು ಏರಿಕೆ ಕಂಡಿದ್ದು, 8,973ಕ್ಕೆ ತಲುಪಿದೆ.

ಇಂದು ವಾರದ ನಿಫ್ಟಿಯ ಕೊನೆಯ ದಿನವಾಗಿದ್ದು, ಈ ವಾರದಲ್ಲಿ ಆಶಾದಾಯಕ ಬೆಳವಣಿಗೆಗಳು ಗೋಚರಿಸಿವೆ. ಲಾಕ್​ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿದ್ದರೂ ಕೂಡಾ ಸ್ವಲ್ಪ ಮಟ್ಟಿಗೆ ವ್ಯವಹಾರದಲ್ಲಿ ಚೇತರಿಕೆ ಕಾಣುತ್ತಿದೆ. ಇನ್ನೊಂದೆಡೆ ಅಮೆರಿಕನ್​ ಡಾಲರ್ ಎದುರು ರೂಪಾಯಿಯ ಮೌಲ್ಯವೂ 27 ಪೈಸೆಗಳಷ್ಟು ಏರಿಕೆ ಕಂಡಿದೆ.

ABOUT THE AUTHOR

...view details