ಕರ್ನಾಟಕ

karnataka

ETV Bharat / bharat

ಸಾರ್ವಕಾಲಿಕ ಎತ್ತರಕ್ಕೆ ಸೆನ್ಸೆಕ್ಸ್​, ನಿಫ್ಟಿ; ಆಶಾಭಾವ ಮೂಡಿಸಿದ ಅಮೆರಿಕ ಕೋವಿಡ್ ಪ್ಯಾಕೇಜ್

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಶೇರು ಮಾರುಕಟ್ಟೆಯ ಸೆನ್ಸೆಕ್ಸ್​ ಹಾಗೂ ನಿಫ್ಟಿ ಎರಡೂ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಜಿಗಿದಿವೆ. ಸೆನ್ಸೆಕ್ಸ್​ 47,354 ಕ್ಕೂ ಅಧಿಕ ಅಂಕಗಳಿಗೆ ಏರಿದ್ದು ಶೇರು ಮಾರುಕಟ್ಟೆಯ ಐತಿಹಾಸಿಕ ದಾಖಲೆಯಾಗಿದೆ.

Sensex and Nifty hit all time high points
Sensex and Nifty hit all time high points

By

Published : Dec 28, 2020, 11:11 AM IST

ಮುಂಬೈ: ಕೊರೊನಾ ಬಿಕ್ಕಟ್ಟಿನ ಆರ್ಥಿಕ ಸಂಕಷ್ಟದಿಂದ ತನ್ನ ದೇಶವನ್ನು ಪಾರು ಮಾಡಲು ಅಮೆರಿಕ ಕೋವಿಡ್ ಪರಿಹಾರ ಪ್ಯಾಕೇಜ್​ಗೆ ಅನುಮೋದನೆ ನೀಡಿದ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲೂ ಚೇತರಿಕೆ ಕಾಣಿಸಿಕೊಂಡಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಶೇರು ಮಾರುಕಟ್ಟೆಯ ಸೆನ್ಸೆಕ್ಸ್​ ಹಾಗೂ ನಿಫ್ಟಿ ಎರಡೂ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಜಿಗಿದಿವೆ. ಸೆನ್ಸೆಕ್ಸ್​ 47,354 ಕ್ಕೂ ಅಧಿಕ ಅಂಕಗಳಿಗೆ ಏರಿದ್ದು ಶೇರು ಮಾರುಕಟ್ಟೆಯ ಐತಿಹಾಸಿಕ ದಾಖಲೆಯಾಗಿದೆ.

13,800 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ನಿಫ್ಟಿ ಸೂಚ್ಯಂಕ 13,865 ಅಂಕಗಳವರೆಗೂ ಏರಿಕೆಯಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೊರೊನಾ ಪರಿಹಾರ ಪ್ಯಾಕೇಜ್​ಗೆ ಹಸ್ತಾಕ್ಷರ ಹಾಕಿದ್ದರಿಂದ ಏಶಿಯಾದ ಬಹುತೇಕ ಎಲ್ಲ ಶೇರು ಮಾರುಕಟ್ಟೆಗಳಲ್ಲಿ ಖುಷಿಯ ಅಲೆ ಕಾಣಿಸಿದೆ. ಹಾಗೆಯೇ ಭಾರತೀಯ ಶೇರು ಮಾರುಕಟ್ಟೆ ಸಹ ಉತ್ತಮ ಬೆಳವಣಿಗೆ ದಾಖಲಿಸಿದೆ.

ABOUT THE AUTHOR

...view details