ಕರ್ನಾಟಕ

karnataka

ETV Bharat / bharat

ಬಿಹಾರ ಚುನಾವಣೆ: ಕಾಂಗ್ರೆಸ್​​, ಆರ್​​ಜೆಡಿಗೆ 'ಕೈ' ಕೊಟ್ಟು ಜೆಡಿಯು ಸೇರಿದ ಪ್ರಮುಖರು! - ಬಿಹಾರ ವಿಧಾನಸಭಾ ಚುನಾವಣೆ

ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದ್ದು, ಇದರ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ವಿವಿಧ ಪಕ್ಷದ ನಾಯಕರು ಜೆಡಿಯು ಪಕ್ಷ ಸೇರಿಕೊಂಡಿದ್ದಾರೆ.

Assembly elections in Bihar
Assembly elections in Bihar

By

Published : Sep 11, 2020, 8:15 PM IST

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭಗೊಂಡಿದ್ದು, ಇದರ ಮಧ್ಯೆ ವಿವಿಧ ಪಕ್ಷದ ಮುಖಂಡರು ಮಾತೃ ಪಕ್ಷಕ್ಕೆ ಕೈ ಕೊಟ್ಟು ಪಕ್ಷಾಂತರ ಮಾಡುತ್ತಿದ್ದಾರೆ. ಸದ್ಯ ಕಾಂಗ್ರೆಸ್​​, ಆರ್​​ಜೆಡಿ ಹಾಗೂ ಆರ್​​​​​ಎಲ್​​ಎಸ್​​ಪಿ ಪಕ್ಷದ ಅನೇಕರು ಆಡಳಿತರೂಢ ಪಕ್ಷ ಜೆಡಿಯು ಸೇರಿಕೊಂಡಿದ್ದಾರೆ.

ಆರ್​​ಜೆಡಿ ಪ್ರಮುಖ ಮುಖಂಡ ಭೋಲಾ ರೈ, ಕಾಂಗ್ರೆಸ್​ ಮುಖಂಡರಾದ ಪೂರ್ಣಿಮಾ ಯಾದವ್​​, ಸುದರ್ಶನ್​ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖಂಡ ಅಭಿಷೇಕ್​ ಜಾ ಇಂದು ಜೆಡಿಯು ಹಿರಿಯ ನಾಯಕ ಲಾಲನ್​​​ ಸಿಂಗ್​ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡಿದ್ದಾರೆ.

ವಿವಿಧ ಪಕ್ಷ ತೊರೆದು ಜೆಡಿಯು ಸೇರಿದ ಪ್ರಮುಖರು

ಪಕ್ಷಕ್ಕೆ ಅವರನ್ನ ಸ್ವಾಗತಿಸಿ ಮಾತನಾಡಿದ ಸಿಂಗ್​​, ಇದು ಕೇವಲ ಟ್ರೈಲರ್​ ಎಂದಿದ್ದು, ಮುಂದಿನ ದಿನಗಳಲ್ಲಿ ನಿಜವಾದ ಸಿನಿಮಾ ರಿಲೀಸ್​ ಆಗಲಿದೆ ಎಂದು ತಿಳಿಸಿದ್ದಾರೆ.ಈ ಮೂಲಕ ಬರುವ ದಿನಗಳಲ್ಲಿ ಹೆಚ್ಚಿನ ನಾಯಕರು ಮುಖ್ಯಮಂತ್ರಿ ನಿತೀಶ್​​​ ಕುಮಾರ್​ ನೇತೃತ್ವದ ಜೆಡಿಯು ಪಕ್ಷ ಸೇರಿಕೊಳ್ಳಲಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಆರ್​ಜೆಡಿ ತೊರೆದ ಲಾಲು ಆಪ್ತ!

ನಿನ್ನೆಯಷ್ಟೇ ಹಿರಿಯ ಮುಖಂಡ ರಘುವಂಶ್​ ಪ್ರಸಾದ್​ ಸಿಂಗ್​ ಆರ್​ಜೆಡಿ ಪಕ್ಷ ತೊರೆದು ಲಾಲು ಪ್ರಸಾದ್​ ಯಾದವ್​ ಅವರಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಾಲು ಪ್ರಸಾದ್​ ನೀವೂ ಎಲ್ಲಿಗೂ ಹೋಗುತ್ತಿಲ್ಲ ಎಂದು ಹೇಳಿದ್ದರು. ಬಿಹಾರ ಅಸೆಂಬ್ಲಿ ಚುನಾವಣೆ ಅಕ್ಟೋಬರ್​​-ನವೆಂಬರ್​​ ತಿಂಗಳಲ್ಲಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣೆ ಆಯೋಗ ಇಲ್ಲಿಯವರೆಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ABOUT THE AUTHOR

...view details