ಕರ್ನಾಟಕ

karnataka

ETV Bharat / bharat

ಯುವತಿ ಮೇಲೆ ರೈಲ್ವೆ ಅಧಿಕಾರಿಗಳಿಂದಲೇ ಗ್ಯಾಂಗ್​ ರೇಪ್ ಆರೋಪ: ಭೋಪಾಲ್​ನಲ್ಲಿ ಮಾನಗೇಡಿ ಕೃತ್ಯ - Bhoopal latest news

ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ಇಬ್ಬರು ಅಧಿಕಾರಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ಕೆಲಸ ಕೊಡಿಸುವ ಆಮಿಷವೊಡ್ಡಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

Senior Railway Officials Gang-Raped The girl
ರೈಲ್ವೇ ಅಧಿಕಾರಿಗಳಿಂದಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

By

Published : Sep 27, 2020, 1:26 PM IST

ಭೋಪಾಲ್: ರೈಲ್ವೆ ಅಧಿಕಾರಿಗಳೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ಘಟನೆ ಮಧ್ಯ ಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ಭೋಪಾಲ್‍ನ ಮುಖ್ಯ ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ಇಬ್ಬರು ರೈಲ್ವೆ ಅಧಿಕಾರಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಜೇಶ್ ತಿವಾರಿ(45), ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಯುವತಿ ಉತ್ತರ ಪ್ರದೇಶದ ಮಾಹೋಬ್‍ನವಳಾಗಿದ್ದು, ಅತ್ಯಾಚಾರ ಆರೋಪಿ ತಿವಾರಿಯು ಯುವತಿಗೆ ಫೇಸ್​ಬುಕ್​ ಸ್ನೇಹಿತನಾಗಿದ್ದ. ಕೆಲಸ ಕೊಡಿಸುವುದಾಗಿ ರೈಲ್ವೆ ನಿಲ್ದಾಣದ ಪ್ರದೇಶಕ್ಕೆ ಕರೆಸಿಕೊಂಡಿದ್ದ ಈತ, ತನ್ನ ಸ್ನೇಹಿತನ ಜೊತೆ ಸೇರಿ ಯುವತಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗ್ತಿದೆ.

ಘಟನೆ ಸಂಬಂಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details