ಪುಣೆ( ಮಹಾರಾಷ್ಟ್ರ):ಇಲ್ಲಿನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಡಾ. ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ಒಳಗಾದ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಸಿಕೊಂಡ ನಂತರ ಅವರನ್ನು ಇತ್ತೀಚೆಗೆ ಮನೆಗೆ ಕಳುಹಿಸಲಾಗಿತ್ತು. 91ನೇ ವಯಸ್ಸಿನಲ್ಲಿ ಕೊರೊನಾ ಸೋಲಿಸಿದ ಅವರನ್ನು ಯೋಧನೆಂದು ಪರಿಗಣಿಸಲಾಗಿತ್ತು. ಆದರೆ ಅವರು ಮುಂಜಾನೆ 2.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ನೀಲಂಗ ವಿಧಾನಸಭಾ ಕ್ಷೇತ್ರದಲ್ಲಿ ಅವರು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ನಿಲಂಗದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು. ಅವರು ಫೆಬ್ರವರಿ 09, 1931ರಂದು ನೀಲಂಗದಲ್ಲಿ ಜನಿಸಿದ್ದರು. ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಅವರು ಪ್ರಮುಖ ಹೋರಾಟಗಾರರಾಗಿದ್ದರು.