ಕರ್ನಾಟಕ

karnataka

ETV Bharat / bharat

ಸುಷ್ಮಾ ನಿಧನಕ್ಕೂ ಕೆಲ ಹೊತ್ತಿನ ಮುಂಚೆ ವಕೀಲ ಹರೀಶ್​ ಸಾಳ್ವೆಗೆ ಹೀಗೆ ಹೇಳಿದ್ರಂತೆ! - ಹಿರಿಯ ವಕೀಲ ಹರೀಶ್ ಸಾಳ್ವೆ

ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆಯೊಂದು ಸದ್ಯ ಗಮನ ಸೆಳೆಯುತ್ತಿದೆ. ಸುಷ್ಮಾ ಸ್ವರಾಜ್​ ನಿಧನಕ್ಕೂ ಕೆಲ ಕ್ಷಣಗಳ ಮುನ್ನ ಹರೀಶ್​ ಸಾಳ್ವೆ ಕೆಲ ಹೊತ್ತು ಸುಷ್ಮಾ ಅವರ ಜೊತೆ ಮಾತನಾಡಿದ್ದರಂತೆ.

ಸುಷ್ಮಾ

By

Published : Aug 7, 2019, 1:56 PM IST

ನವದೆಹಲಿ:ಸಮರ್ಥ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಹಾಗೂ ಕ್ರಿಕೆಟ್ ವಲಯದಿಂದ ಸಂತಾಪ ವ್ಯಕ್ತವಾಗುತ್ತಿದೆ.

ಇದರ ನಡುವೆ ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿಕೆಯೊಂದು ಸದ್ಯ ಗಮನ ಸೆಳೆಯುತ್ತಿದೆ. ಸುಷ್ಮಾ ಸ್ವರಾಜ್​ ನಿಧನಕ್ಕೂ ಕೆಲ ಕ್ಷಣಗಳ ಮುನ್ನ ಹರೀಶ್​ ಸಾಳ್ವೆ ಕೆಲ ಹೊತ್ತು ಸುಷ್ಮಾ ಅವರ ಜೊತೆ ಮಾತನಾಡಿದ್ದರಂತೆ.

ರಾತ್ರಿ 8.45ಕ್ಕೆ ಸುಷ್ಮಾ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದ ಹರೀಶ್ ಸಾಳ್ವೆ, ಕುಲಭೂಷಣ್​ ಜಾಧವ್​ ವಿಚಾರದ ಬಗ್ಗೆ ಮಾತನಾಡಿದ್ದರು. ಕುಲಭೂಷಣ್​ ಪ್ರಕರಣದಲ್ಲಿ ಭಾರತದ ಪರವಾಗಿ ದಿಟ್ಟವಾಗಿ ವಾದ ಮಂಡಿಸಿ ಗೆದ್ದಿದ್ದ ಹರೀಶ್ ಸಾಳ್ವೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆದಿರಲಿಲ್ಲ.

ಇದೇ ವಿಚಾರ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್​​, ಬುಧವಾರ ಬೆಳಗ್ಗೆ ಬಂದು ವಾದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಂಡು ಹೋಗಿ ಎಂದಿದ್ದರು. ನಮ್ಮ ಮಾತು ಮುಗಿದ ಹತ್ತೇ ನಿಮಿಷಕ್ಕೆ ಸುಷ್ಮಾ ಅವರಿಗೆ ಹೃದಯಾಘಾತವಾಗಿತ್ತು ಎಂದು ಹರೀಶ್ ಸಾಳ್ವೆ ಹೇಳಿಕೊಂಡಿದ್ದಾರೆ.

ABOUT THE AUTHOR

...view details