ಕರ್ನಾಟಕ

karnataka

ETV Bharat / bharat

ರೈಲ್ವೆ ಸಚಿವ ಪಿಯೂಷ್ ಗೋಯಲ್​​ ಕಾಲೆಳೆದ ಶಿವಸೇನೆ - ರೈಲ್ವೆ ಸಚಿವ ಪಿಯೂಷ್ ಗೋಯಲ್

ವಲಸಿಗರು ಸರಿಯಾದ ಸಮಯಕ್ಕೆ ಊರು ಸೇರಬೇಕು ಎಂಬುದು ನಮ್ಮ ಮನವಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್, ಪಿಯೂಷ್​ ಗೋಯಲ್​​​​ ​ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗೋಯಲ್​​ ಕಾಲೆಳೆದ ಶಿವಸೇನಾ ಮುಖಂಡ ಸಂಜಯ್ ರೌತ್
ಗೋಯಲ್​​ ಕಾಲೆಳೆದ ಶಿವಸೇನಾ ಮುಖಂಡ ಸಂಜಯ್ ರೌತ್

By

Published : May 25, 2020, 5:39 PM IST

ಮುಂಬೈ (ಮಹಾರಾಷ್ಟ್ರ): ವಾಸೈ ರಸ್ತೆ - ಗೋರಖ್‌ಪುರ್ ಶರ್ಮಿಕ್ ವಿಶೇಷ ರೈಲು ಒಡಿಶಾ ಮೂಲಕ ಚಲಿಸಿದೆ. ಇದರಿಂದ ವಲಸಿಗರು ತಡವಾಗಿ ತಮ್ಮ ಊರುಗಳನ್ನು ತಲುಪಿದ್ದಾರೆ. ಅವರೆಲ್ಲರೂ ಸರಿಯಾದ ಸಮಯಕ್ಕೆ ಊರು ಸೇರಬೇಕು ಎಂಬುದು ನಮ್ಮ ಮನವಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.

"ಮಹಾರಾಷ್ಟ್ರದಿಂದ 125 ರೈಲುಗಳ ಪಟ್ಟಿ ಎಲ್ಲಿದೆ? ಮುಂಜಾನೆ 2 ರ ಹೊತ್ತಿಗೆ, ಕೇವಲ 46 ರೈಲುಗಳ ಪಟ್ಟಿಯನ್ನು ಸ್ವೀಕರಿಸಲಾಗಿದೆ, ಅದರಲ್ಲಿ 5 ರೈಲುಗಳು ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಹೋಗುತ್ತವೆ. ಇದು ಅಂಫಾನ್​ ಚಂಡಮಾರುತದಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.125 ರೈಲುಗಳನ್ನು ನೀಡಲು ವಾವು ಸಿದ್ಧವಾಗಿದ್ದರೂ, ಇಂದು ಕೇವಲ 41 ರೈಲುಗಳನ್ನು ಮಾತ್ರ ತಿಳಿಸಲಾಗಿದೆ. ಇನ್ನೊಂದು ಗಂಟೆಯೊಳಗಾಗಿ ರೈಲು ಎಲ್ಲಿಂದ ಓಡುತ್ತದೆ, ರೈಲುಗಳ ಪ್ರಕಾರ ಪ್ರಯಾಣಿಕರ ಪಟ್ಟಿ, ಅವರ ವೈದ್ಯಕೀಯ ಪ್ರಮಾಣಪತ್ರ ಮತ್ತು ರೈಲು ಎಲ್ಲಿಗೆ ಹೋಗಬೇಕು ಎಂಬಂತಹ ಎಲ್ಲ ಮಾಹಿತಿಯನ್ನು ದಯವಿಟ್ಟು ಒದಗಿಸುವಂತೆ ನಾನು ವಿನಂತಿಸುತ್ತಿದ್ದೇನೆ. ಇದರಿಂದ ನಾವು ರೈಲುಗಳ ಸಮಯವನ್ನು ಯೋಜಿಸಬಹುದು ಎಂದು ರೈಲ್ವೆ ಸಚಿವರು ಟ್ವೀಟ್ ಮಾಡಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಸೋಮವಾರ ಟ್ವೀಟ್ ಮಾಡಿದ್ದು, ಮೇ 14 ರಂದು ಹೊರಟ ನಾಗ್ಪುರ-ಉದಾಂಪುರ್ ರೈಲಿಗೆ ಪಟ್ಟಿ ಎಲ್ಲಿದೆ? ಮೊದಲ ರೈಲಿನ ನಂತರ ಜನರನ್ನು ಒಟ್ಟುಗೂಡಿಸಲು ನೀವು ಯಾಕೆ ತೊಂದರೆ ತೆಗೆದುಕೊಂಡಿದ್ದೀರಿ, ದಯವಿಟ್ಟು ಘೋಷಿಸಿ? ನೀವು ಈಗ ಯಾವ ರೀತಿಯ ಪಟ್ಟಿಯನ್ನು ಬಯಸುತ್ತೀರಿ? ನೀವು ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತೀರಿ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಮೇ 21 ರಂದು ಪಾಲ್ಘರ್‌ನಿಂದ ಹೊರಟ ವಾಸೈ ರಸ್ತೆ-ಗೋರಖ್‌ಪುರ್ ಶ್ರಮಿಕ್​​ ವಿಶೇಷ ರೈಲು ಉತ್ತರ ಪ್ರದೇಶಕ್ಕೆ ಭಾರೀ ದಟ್ಟಣೆಯಿಂದಾಗಿ ಒಡಿಶಾ ಮಾರ್ಗವಾಗಿ ತೆರಳಿತು. ಇದರಿಂದಾಗಿ 25 ಗಂಟೆಗಳಲ್ಲಿ ತಲುಪಬೇಕಿದ್ದ ರೈಲು, ಎರಡೂವರೆ ದಿನಗಳ ನಂತರ ಗೋರಖ್‌ಪುರವನ್ನು ತಲುಪಿತು.

ABOUT THE AUTHOR

...view details