ನವದೆಹಲಿ:'ಆತ್ಮನಿರ್ಭರ ಭಾರತ' ಜಾಗತಿಕ ಕಲ್ಯಾಣದ ದೃಷ್ಟಿ ಒಳಗೊಂಡಿದೆ ಮತ್ತು ಈ ಕನಸು ನನಸಾಗಿಸಲು ಭಾರತೀಯ ವಲಸೆಗಾರರ ಬೆಂಬಲವನ್ನು ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಾಗರೋತ್ತರ ಮತ್ತು ಅನಿವಾಸಿ ಭಾರತೀಯ ಸಂಶೋಧಕರ ಮತ್ತು ಶಿಕ್ಷಣ ತಜ್ಞರ ಜಾಗತಿಕ ವರ್ಚುವಲ್ ಶೃಂಗಸಭೆಯ ವೈಶ್ವಿಕ್ ಭಾರತೀಯ ವೈಜ್ಞಾನಿಕ್ (ವೈಭವ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ವಿಜ್ಞಾನದ ಶ್ರೀಮಂತ ಇತಿಹಾಸ ವರ್ಧಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಕಳೆದ ಒಂದು ಶತಮಾನದಿಂದ ವಿಜ್ಞಾನದ ನೆರವಿನಿಂದ ಅನೇಕ ಐತಿಹಾಸಿಕ ಪ್ರಶ್ನೆಗಳನ್ನು ಪರಿಹರಿಸಲಾಗಿದೆ ಎಂದರು.
'ಆತ್ಮನಿರ್ಭರ ಭಾರತ' (ಸೆಲ್ಫ್-ರಿಲಯಂಟ್ ಇಂಡಿಯಾ) ಜಾಗತಿಕ ಕಲ್ಯಾಣದ ದೃಷ್ಟಿಯನ್ನು ಒಳಗೊಂಡಿದೆ. ಈ ಕನಸನ್ನು ನನಸಾಗಿಸಲು ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ ಮತ್ತು ನಿಮ್ಮ ಬೆಂಬಲವನ್ನು ಕೋರುತ್ತೇನೆ ಎಂದು ಹೇಳಿದರು.
ಇತ್ತೀಚೆಗೆ ಭಾರತವು ಪ್ರವರ್ತಕವಾದ ಬಾಹ್ಯಾಕಾಶ ಸುಧಾರಣೆಗಳನ್ನು ಪರಿಚಯಿಸಿತು. ಈ ಸುಧಾರಣೆಗಳು ಉದ್ಯಮಗಳಿಗೆ ಮತ್ತು ಅಕಾಡೆಮಿಗಳಿಗೆ ಅವಕಾಶಗಳನ್ನು ಒದಗಿಸುತ್ತದೆ ಎಂದು ವಿಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಹೆಚ್ಚಿಸಲು ತಮ್ಮ ಸರ್ಕಾರ ಕೈಗೊಂಡ ಹಲವು ಕ್ರಮಗಳ ಬಗ್ಗೆ ತಿಳಿಸಿದರು.
ರೈತರಿಗೆ ನೆರವಾಗಲು ಉನ್ನತ ದರ್ಜೆಯ ವೈಜ್ಞಾನಿಕ ಸಂಶೋಧನೆಯನ್ನು ಸರ್ಕಾರ ಬಯಸಿದೆ. ನಮ್ಮ ಕೃಷಿ ಸಂಶೋಧನಾ ವಿಜ್ಞಾನಿಗಳು ನಮ್ಮ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಶ್ರಮಿಸಿದ್ದಾರೆ. ಇಂದು ನಾವು ನಮ್ಮ ದ್ವಿದಳ ಧಾನ್ಯಗಳ ಒಂದು ಸಣ್ಣ ಭಾಗವನ್ನು ಮಾತ್ರ ಆಮದು ಮಾಡಿಕೊಳ್ಳುತ್ತೇವೆ. ನಮ್ಮ ಆಹಾರ - ಧಾನ್ಯ ಉತ್ಪಾದನೆಯು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದರು.
ಸ್ಥಳೀಯ ಲಸಿಕೆ ಉತ್ಪಾದನೆಗೆ ತಮ್ಮ ಸರ್ಕಾರ ಉತ್ತೇಜನ ನೀಡುತ್ತಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೋಟಾವೈರಸ್ ಲಸಿಕೆ ಸೇರಿದಂತೆ ನಾಲ್ಕು ಹೊಸ ಲಸಿಕೆಗಳನ್ನು 2014ರಲ್ಲಿ ನಮ್ಮ ಸಂವಹನ ಕಾರ್ಯಕ್ರಮಕ್ಕೆ ಪರಿಚಯಿಸಲಾಯಿತು ಎಂದು ಹೇಳಿದರು.