ಹೈದರಾಬಾದ್:ಕೊರೊನಾ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿರುವುದು ಭಾರತದಾದ್ಯಂತ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗಿದೆ. ಇದು ಸೌಮ್ಯ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಜನರಿಗೆ ಸ್ವಯಂ-ಪ್ರತ್ಯೇಕತೆಗಾಗಿ ಶಿಫಾರಸುಗಳಿಗೆ ಕಾರಣವಾಗಿದೆ.
ಹೈದರಾಬಾದ್‌ನ ವಿಐಎನ್ ಆಸ್ಪತ್ರೆಯ ಕನ್ಸಲ್ಟೆಂಟ್ ವೈದ್ಯ ಡಾ.ರಾಜೇಶ್ ವುಕ್ಕಲಾ, ಸಣ್ಣ ಮನೆಗಳಲ್ಲಿ ವಾಸಿಸುವ ಹೆಚ್ಚಿನ ಜನರಿಗೆ, ಐಸಿಎಂಆರ್ ಶಿಫಾರಸು ಮಾಡಿದಂತೆ ಸ್ವಯಂ-ಪ್ರತ್ಯೇಕ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಿದೆ . ಮನೆಯಲ್ಲಿ ಸ್ವಯಂ-ಪ್ರತ್ಯೇಕತೆ ಸಾಧ್ಯವಾಗದಿದ್ದರೆ, ವಿಶೇಷವಾಗಿ 1BHK ಅಥವಾ ದೊಡ್ಡ ಕುಟುಂಬಗಳಲ್ಲಿ ವಾಸಿಸುವ ಜನರಿಗೆ, ಅನೇಕ ಹೋಟೆಲ್‌ಗಳು ಸಹ ತಮ್ಮ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿವೆ. ಯಾವುದೇ ಸೌಮ್ಯ ರೋಗಲಕ್ಷಣಗಳಿದ್ದಲ್ಲಿ ನೀವು ಕನಿಷ್ಠ 2 ವಾರಗಳವರೆಗೆ ಅಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಬಹುದು. ಆದರೆ, ಸೋಂಕು ಹರಡದಂತೆ ತಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಈ ಕುರಿತು ಡಾ.ರಾಜೇಶ್ ವುಕ್ಕಲಾ ಕೆಲವು ಸಲಹೆಗಳನ್ನು ನೀಡಿದ್ದಾರೆ.