ಪಶ್ಚಿಮ ಬಂಗಾಳ/ಜಲ್ಪೈಗುರಿ:ಅಪರೂಪದ ಕಾಡುಪ್ರಾಣಿ ಚಿಪ್ಪು ಹಂದಿಯನ್ನು ಹಿಡಿದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಭೂತಾನ್ ಮೂಲದ ಐವರು ವ್ಯಕ್ತಿಗಳು ಯತ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಉತ್ತರ ಬಂಗಾಳದ ಕಾರ್ಯಪಡೆ ಹಾಗೂ ಬೆಲಕೋಬಾ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದಾರೆ.
ಆರೋಪಿಗಳು ಬೆಲಕೋಬಾ ಅರಣ್ಯ ಪ್ರದೇಶದಲ್ಲಿ ಚಿಪ್ಪುಹಂದಿ ಹಿಡಿದು ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ನಾಗ್ರಕಾತದಲ್ಲಿ ಐವರು ಭೂತಾನ್ ದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.