ಕರ್ನಾಟಕ

karnataka

ETV Bharat / bharat

ಭಾರತದಲ್ಲಿನ ಅಮೆರಿಕ, ಇಸ್ರೇಲ್​ ಕಚೇರಿಗಳಿಗೆ ಬಿಗಿ ಭದ್ರತೆ - ಭಾರತದಲ್ಲಿರುವ ಯುಎಸ್​ ಹಾಗೂ ಇಸ್ರೇಲ್​ ದೇಶಗಳ ರಾಯಭಾರಿ ಕಚೇರಿ

ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಅಮೆರಿಕ ಬೆಂಬಲಕಕ್ಕೆ ನಿಂತಿರುವ ಇಸ್ರೇಲ್​ ದೇಶದ ಮೇಲೆ ದಾಳಿ ನಡೆಸುವುದಾಗಿಯೂ ಇರಾನ್​ ಎಚ್ಚರಿಕೆ ನೀಡಿದೆ. ಇರಾನ್​ನಿಂದ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ದೆಹಲಿಯಲ್ಲಿರುವ ಅಮೆರಿಕ ಹಾಗೂ ಇಸ್ರೇಲ್​ ರಾಯಭಾರಿ ಕಚೇರಿಗಳ ಸುತ್ತ ಹೆಚ್ಚಿನ ಭದ್ರತೆ ನೀಡಲಾಗಿದೆ.

US embassy in delhi
ದೆಹಲಿಯಲ್ಲಿನ ಯುಎಸ್​ ರಾಯಭಾರ ಕಚೇರಿ

By

Published : Jan 9, 2020, 5:50 PM IST

ನವದೆಹಲಿ:ಇರಾನ್​ನ ಹಿರಿಯ ಸೇನಾ ಕಮಾಂಡರ್​ ಹತ್ಯೆ ಬಳಿಕ ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಭಾರತದಲ್ಲಿರುವ ಯುಎಸ್​ ಹಾಗೂ ಇಸ್ರೇಲ್​ ದೇಶಗಳ ರಾಯಭಾರಿ ಕಚೇರಿಗಳಿಗೆ ಸರ್ಕಾರದಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಬಾಗ್ದಾದ್​ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್​ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ, ಬಾಗ್ದಾದ್ ಏರ್​​ಪೋರ್ಟ್​ನಲ್ಲಿ ವೈಮಾನಿಕ ದಾಳಿ ನಡೆಸಿ ಇರಾಕ್​ ಹಾಗೂ ಇರಾನ್​ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್‌ ಜನರಲ್‌ ಕಾಸಿಮ್‌ ಸುಲೇಮಾನಿಯನ್ನು ಕೊಂದಿತ್ತು. ಆ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ಭೀತಿ ಏರ್ಪಟ್ಟಿದೆ.

ಇತ್ತ ಅಮೆರಿಕ ಬೆಂಬಲಕಕ್ಕೆ ನಿಂತಿರುವ ಇಸ್ರೇಲ್​ ದೇಶದ ಮೇಲೆ ದಾಳಿ ನಡೆಸುವುದಾಗಿಯೂ ಇರಾನ್​ ಎಚ್ಚರಿಕೆ ನೀಡಿದ್ದು, ಒಂದು ವೇಳೆ ನಮ್ಮ ಮೇಲೆ ಇರಾನ್​ ದಾಳಿ ನಡೆಸಿದರೆ ಅದಕ್ಕೆ ಬಲವಾದ ಪ್ರಹಾರ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಜೆರುಸಲೇಂನಲ್ಲಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ. ಇರಾನ್​ನಿಂದ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ದೆಹಲಿಯಲ್ಲಿರುವ ಅಮೆರಿಕ ಹಾಗೂ ಇಸ್ರೇಲ್​ ರಾಯಭಾರಿ ಕಚೇರಿಗಳಲ್ಲಿನ ಸಿಬ್ಬಂದಿಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ರಾಜತಾಂತ್ರಿಕ ಭದ್ರತಾ ಪಡೆಗಳು ಕಚೇರಿಗಳ ಸುತ್ತ ಸುಮಾರು ಎಂಟು ಕಿ.ಮೀ ವರೆಗೂ ಗಸ್ತು ತಿರುಗುತ್ತಿರುವುದಾಗಿ ತಿಳಿದು ಬಂದಿದೆ.

ನಾವು ಇರಾನ್​​ನಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ಇರಾನ್​ ಹಾಗೂ ಅಮೆರಿಕಾ ದೇಶಗಳ ಅಧಿಕಾರಿಗಳ ಜೊತೆ ನಮ್ಮ ಸಚಿವಾಲಯ ಮಾತನಾಡುತ್ತಿದ್ದು, ಪರಿಸ್ಥಿತಿ ಉಲ್ಬಣಗೊಳ್ಳದಿರಲೆಂದು ಬಯಸುತ್ತೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details