ಕರ್ನಾಟಕ

karnataka

ETV Bharat / bharat

ರಕ್ಷಕನೇ ನರಭಕ್ಷಕ... ಎಂಟು ಮಂದಿ  ಬಲಿ ಪಡೆದ ಸೆಕ್ಯೂರಿಟಿ ಗಾರ್ಡ್​! - ಆಂಧ್ರ ಅಪರಾಧ ಸುದ್ದಿ

ಅಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್​ ಒಬ್ಬ ಎಂಟು ಜನರನ್ನು ಬಲಿ ಪಡೆದಿರುವ ಘಟನೆ ಆಂಧ್ರಪ್ರದೇಶವನ್ನೇ ಬೆಚ್ಚಿ ಬೀಳಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 29, 2019, 1:01 PM IST

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ):ಸೆಕ್ಯೂರಿಟಿ ಗಾರ್ಡ್​ ಒಬ್ಬ ತನ್ನ ಅಕ್ರಮ ಕೆಲಸದ ಬಗ್ಗೆ ತಿಳಿದುಕೊಂಡವರನ್ನ ವಿಷಕೊಟ್ಟು ಕೊಲೆ ಮಾಡುತ್ತಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ಅಕ್ಟೋಬರ್​ 16ರಂದು ಎಲೂರಿನಲ್ಲಿ ವ್ಯಾಯಾಮ ಶಿಕ್ಷಕ (ಪಿಟಿ ಮಾಸ್ಟರ್​) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆತನ ಸಾವಿಗೆ ವಿಷ ಪ್ರಯೋಗ ಕಾರಣ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸೆಕ್ಯೂರಿಟಿ ಗಾರ್ಡ್​ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರ ಬಂದಿದೆ.

ಪೊಲೀಸ್​ ವಿಚಾರಣೆ ವೇಳೆ ಆರೋಪಿ ಸೆಕ್ಯೂರಿಟಿ ಗಾರ್ಡ್​ ಈ ಹಿಂದೆ ಮಾಡಿರುವ ಕೊಲೆಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಎಲೂರಿನಲ್ಲಿ ಮೂರು, ಪೂರ್ವ ಗೋದಾವರಿ ಜಿಲ್ಲೆಯ ರಾಜ ಮಹೇಂದ್ರವರಂನ ಬೊಮ್ಮೂರು ವ್ಯಾಪ್ತಿಯಲ್ಲಿ ನಾಲ್ಕು, ಕೃಷ್ಣಾ ಜಿಲ್ಲೆಯಲ್ಲಿ ಒಬ್ಬರನ್ನು ಸೇರಿ ಒಟ್ಟು ಎಂಟು ಜನರನ್ನು ಕೊಲೆ ಮಾಡಿರುವುದಾಗಿ ಆರೋಪಿ ಸೆಕ್ಯೂರಿಟಿ ಗಾರ್ಡ್​ ಹೇಳಿದ್ದಾನೆ.

ಕೊಲೆಗೆ ಕಾರಣವೇನು?
ಆರೋಪಿ ಸೆಕ್ಯೂರಿಟಿ ಗಾರ್ಡ್​ ವಿಶೇಷ ನಾಣ್ಯ, ಎರಡು ತಲೆಗಳ ಹಾವುಗಳ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡುತ್ತಿದ್ದನು. ಈ ಮೋಸದ ಬಗ್ಗೆ ತಿಳಿದವರನ್ನು ಅಜ್ಞಾತ ಸ್ಥಳಕ್ಕೆ ಕರೆಸಿ ತಂಪು ಪಾನಿಯಗಳಲ್ಲಿ ವಿಷ ನೀಡಿ ಕೊಲೆ ಮಾಡುತ್ತಿದ್ದನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ABOUT THE AUTHOR

...view details