ಕರ್ನಾಟಕ

karnataka

ETV Bharat / bharat

ನಾಳೆ ಎನ್​ಆರ್​ಸಿ ಅಂತಿಮ ಪಟ್ಟಿ ಬಿಡುಗಡೆ.. ಅಸ್ಸೋಂನ ಹಲವೆಡೆ ಸೆಕ್ಷನ್ 144 ಜಾರಿ..

ಅಸ್ಸೋಂ ರಾಜ್ಯ ಸರ್ಕಾರ ನಾಳೆ ಎನ್​ಆರ್​ಸಿ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಹಲವೆಡೆ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿದೆ.

By

Published : Aug 30, 2019, 12:06 PM IST

ಸೆಕ್ಷನ್ 144 ಜಾರಿ

ಗುವಾಹಟಿ: ನಾಳೆ ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ(ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್)ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿರುವುದರಿಂದ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಅಸ್ಸೋಂನ ಹಲವೆಡೆ ಸೆಕ್ಷನ್​ 144 ಜಾರಿ ಮಾಡಲಾಗಿದೆ.

ನಾಳೆ ಆನ್​ಲೈನ್​ನಲ್ಲಿ ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್ ಪಟ್ಟಿ ಬಿಡುಗಡೆಯಾಗುತ್ತಿತ್ತು, ಎಲ್ಲಾ ಜಿಲ್ಲೆಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕೆಲವು ವ್ಯಕ್ತಿಗಳು, ಗುಂಪುಗಳು ಅಥವಾ ಸಂಘಗಳು, ಕಚೇರಿಗಳ ಸಾಮಾನ್ಯ ಕಾರ್ಯಚಟುವಟಿಕೆಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಭದ್ರತೆ ಕೈಗೊಳ್ಳಲಾಗಿದೆ.

ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದಿರುವ ಪೊಲೀಸ್​ ಇಲಾಖೆ, ಎನ್​ಆರ್​ಸಿ ಪಟ್ಟಿಯಲ್ಲಿ ಹೆಸರಿಲ್ಲದವರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಎನ್‌ಆರ್‌ಸಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳನ್ನು ವಿದೇಶಿಯರು ಎಂದು ಘೋಷಿಸುವುದಿಲ್ಲ. ವಿದೇಶಿಯರ ನ್ಯಾಯಮಂಡಳಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಐದು ಅಂಶಗಳ ಸಲಹೆಯನ್ನ ಹೊರಡಿಸಲಾಗಿದೆ. ಸಾರ್ವಜನಿಕರ ರಕ್ಷಣೆಯೇ ನಮ್ಮ ಮುಖ್ಯ ಉದ್ದೇಶ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಸೆಕ್ಷನ್ 144 ಜಾರಿಗೊಳಿಸಲಾಗಿದ್ದು ಐದಕ್ಕಿಂತ ಹೆಚ್ಚು ಜನ ಸೇರುವುದು, ಮೆರವಣಿಗೆ, ಪ್ರತಿಭಟನೆ ನಡೆಸುವುದನ್ನ ನಿಷೇಧಿಸಲಾಗಿದೆ.

ABOUT THE AUTHOR

...view details