ನವದೆಹಲಿ: ಕೊರೊನಾ ವೈರಸ್ ಪೀಡಿತ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 323 ಭಾರತೀಯರು ಏರ್ ಇಂಡಿಯಾ ವಿಶೇಷ ವಿಮಾನದ ದೆಹಲಿಗೆ ಬಂದಿಳಿದಿದ್ದಾರೆ.
ಕರೊನಾ ಸೋಂಕು ಭೀತಿ: ಎರಡನೇ ಸರದಿಯಲ್ಲಿ 323 ಮಂದಿ ಭಾರತೀಯರು ವಾಪಸ್ - Corona Viruss
ಕೊರೊನಾ ವೈರಸ್ ಪೀಡಿತ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ 323 ಭಾರತೀಯರನ್ನು ಕೇಂದ್ರ ಸರ್ಕಾರ ಏರ್ ಇಂಡಿಯಾ ಮೂಲಕ ಸ್ವದೇಶಕ್ಕೆ ಕರೆಸಿಕೊಂಡಿದೆ.
ಎರಡನೇ ಸರದಿಯಲ್ಲಿ 323 ಮಂದಿ ಭಾರತೀಯರು ವಾಪಾಸ್
ಎರಡನೇ ಸರದಿಯಲ್ಲಿ ರಾಜಧಾನಿಗೆ ಬಂದಿಳಿದವರಲ್ಲಿ ಮೂವರು ಅಪ್ರಾಪ್ತರು, 211 ವಿದ್ಯಾರ್ಥಿಗಳಿದ್ದಾರೆ. ಜೊತೆಗೆ 7 ಮಂದಿ ಮಾಲ್ಡೀವ್ಸ್ ಪ್ರಜೆಗಳೂ ಇದ್ದಾರೆ. ನಿನ್ನೆಯಷ್ಟೇ ವುಹಾನ್‌ನಿಂದ 324 ಮಂದಿ ಭಾರತೀಯರನ್ನು ಕರೆತರಲಾಗಿತ್ತು.
ಸೋಂಕು ತಪಾಸಣೆ ಹಿನ್ನೆಲೆಯಲ್ಲಿ ಎಲ್ಲರನ್ನೂ ಸೇನೆಯ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
Last Updated : Feb 2, 2020, 1:16 PM IST